Life Lesson: ಮುಂಚೆ ಎಲ್ಲ ಡಿಪ್ರೆಶನ್ ಅನ್ನೋ ಪದದ ಅರ್ಥವೇ ಗ“ತ್ತಿರಲಿಲ್ಲ. ಆದರೆ ಇತ್ತೀಚೆಗೆ, ಯುವ ಪೀಳಿಗೆಯಲ್ಲಿ ಡಿಪ್ರೆಶನ್ ಜೋರಾಗಿದೆ. ಮಾನಸಿಕವಾಗಿ ಕುಗ್ಗುವುದನ್ನೇ ಡಿಪ್ರೆಶನ್ ಎನ್ನಲಾಗುತ್ತದೆ.
ಹೆಣ್ಣು ಎಷ್ಟೇ ಸ್ಟ್ರಾಂಗ್ ಇದ್ದರೂನು. ಆಕೆ ತನ್ನವರಿಂದ ಎಮೋಶನಲ್ ಸಪೋರ್ಟ್ ಬಯಸುತ್ತಾಳೆ. ಆ ಎಮೋಶನಲ್ ಸಪೋರ್ಟ್ ಸಿಗದಿದ್ದಾಗ, ಆಕೆ ಡಿಪ್ರೆಶನ್‌ಗೆ ಹೋಗೋದು, ರಾಕ್ಷಸಿಯಂತೆ ಆಡೋದು ಸಹಜ. ಹಾಗಾಗಿ ಹೆಣ್ಣು ಮಕ್ಕಳ ಜತೆ ಹೆಚ್ಚು ದಿನ ಮಾತು ಬಿಡೋದು, ಪ್ರತಿದಿನ ಜಗಳವಾಡೋದು, ಆಕೆಯನ್ನ ದ್ವೇಷಿಸೋದು, ಚುಚ್ಚು ಮಾತನಾಡೋದು ಇತ್ಯಾದಿ ಮಾಡುವುದರಿಂದ ಆಕೆ ಮಾನಸಿಕವಾಗಿ ಕುಗ್ಗಿಹೋಗುತ್ತಾಳೆ.
ಇದೇ ರೀತಿಯಾದಾಗಲೇ, ಹೆಣ್ಣು ನೇಣಿಗೆ ಶರಣಾಗೋದು, ಮನೆಯಲ್ಲಿರುವವರನ್ನ ಹತ್ಯೆ ಮಾಡುವುದು, ತಾನು ಹೆತ್ತ ಮಗುವನ್ನೇ ಹತ್ಯೆ ಮಾಡೋದೆಲ್ಲ ಮಾಡುತ್ತಾಳೆ. ಆಕೆಗೆ ಸಿಗಬೇಕಾದ ಪ್ರೀತಿ, ಕಾಳಜಿ ಸಿಕ್ಕರೆ, ಆಕೆ ಸರಿಯಾಗಿಯೇ ಇರುತ್ತಾಳೆ ಅನ್ನೋದು ವೈದ್ಯರ ಮಾತು.