ಕೆಲ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಇರುವುದಿಲ್ಲ. ಆಟವಾಡುವುದು, ಟಿವಿ ನೋಡುವುದು, ಹರಟೆ ಹೊಡಿಯುವುದು, ಮೊಬೈಲ್ನಲ್ಲಿ ಆಟ ಆಡೋದು, ಈ ರೀತಿ ಟೈಮ್ಪಾಸ್ಗಳನ್ನ ಮಾಡ್ತಿರ್ತಾರೆ. ಅಂಥ ಮಕ್ಕಳು ಓದಿನಲ್ಲಿ ಗಮನ ಕೊಡಬೇಕು, ಒಳ್ಳೆಯ ಮಾರ್ಕ್ಸ್ ಪಡಿಯಬೇಕು ಅಂತಂದ್ರೆ ಏನು ಮಾಡಬೇಕು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ಕಲಿಯುಗದ ಕಾಮಧೇನು, ಬೇಡಿದನ್ನ ಈಡೇರಿಸುವ, ಕರುಣಾಮಯಿ ಗುರು ರಾಘವೇಂದ್ರರನ್ನ ನೀವು ಪ್ರತೀ ಗುರುವಾರ ಸ್ಮರಿಸಬೇಕು. ಗುರು ರಾಯರನ್ನ ನಂಬಿದವರು ಜೀವನದಲ್ಲಿ ಎಂದು ಸೋತವರಿಲ್ಲ. ಹಾಗಾಗಿ ಗುರುವಿನ ಕೃಪೆ ನಿಮ್ಮ ಮಕ್ಕಳ ಮೇಲಿರಬೇಕು, ಮಕ್ಕಳು ಚೆನ್ನಾಗಿ ಓದಿ ಉತ್ತಮ ಸ್ಥಾನ ಗಳಿಸಬೇಕು ಎಂಬ ಆಸೆ ನಿಮ್ಮಲ್ಲಿದ್ದಲ್ಲಿ ಪ್ರತೀ ಗುರುವಾರ ರಾಯರ ದೇವಸ್ಥಾನಕ್ಕೆ ಹೋಗಿ ಪೂಜೆ ಪ್ರಾರ್ಥಿಸಬೇಕು.
ಪ್ರತೀ ಗುರುವಾರ ರಾಯರ ಮಠಕ್ಕೆ ಹೋಗಿ, ಅಲ್ಲಿ ಸಿಗುವ ಮಂತ್ರಾಕ್ಷತೆಯನ್ನ ತೆಗೆದುಕೊಂಡು ಬಂದು ಅದರಲ್ಲಿ ನಾಲ್ಕು ಕಾಳು ಮಂತ್ರಾಕ್ಷತೆಯನ್ನ ನೀರಿನಲ್ಲಿ ಹಾಕಿ ಆ ನೀರನ್ನ ಮಕ್ಕಳಿಗೆ ಕುಡಿಸಬೇಕು. ಇದರಿಂದ ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನ ಕೊಡ್ತಾರೆ. ಹಠ ಆಲಸ್ಯವನ್ನ ಬಿಟ್ಟು ಓದಲು ಶುರು ಮಾಡ್ತಾರೆ. ರಾಯರ ಅನುಗ್ರಹ ನಿಮ್ಮ ಮಕ್ಕಳ ಮೇಲಿರುತ್ತದೆ. ನಿಮ್ಮ ಮಕ್ಕಳು ಉತ್ತಮ ಸಾಧನೆ ಮಾಡುತ್ತಾರೆ.
ಇನ್ನು ಪ್ರತಿ ಗುರುವಾರ ಹೋಗಲು ಆಗುವುದಿಲ್ಲ. ತಿಂಗಳಲ್ಲಿ ಎರಡರಿಂದ ಮೂರು ಬಾರಿ ಅಷ್ಟೇ ಹೋಗಲು ಸಾಧ್ಯ ಎಂಬುದಾದರೆ, ದೇವಸ್ಥನಾಕ್ಕೆ ಹೋದಾಗ ತಂದಿಟ್ಟ ಅಕ್ಷತೆಯನ್ನ ಸಂಗ್ರಹಿಸಿಟ್ಟುಕೊಂಡು ಅದನ್ನೇ ಬಳಸಬಹುದು.
ಪ್ರತೀ ಗುರುವಾರ ರಾಯರನ್ನ ಪೂಜಿಸಿ, ಭಕ್ತಿ ಇದ್ದರೆ ಮಾತ್ರ ನಿಮ್ಮ ಕೋರಿಕೆ ಈಡೇರಲು ಸಾಧ್ಯ.

ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..




