Sunday, July 6, 2025

Latest Posts

Gokak: ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತದಿಂದ ಎಎಸ್ಐ ದುರ್ಮರಣ

- Advertisement -

Gokak: ಗೋಕಾಕ್: ಗೋಕಾಕ್ ದುರ್ಗಾದೇವಿ ಬಂಡಾರ ಕಾರ್ಯಕ್ರಮದ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದ ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆಯ ಎಎಸ್ಐ ಮೀರಾ ನಾಯಕ್ ಅವರು ಹೃದಯಾಘಾತದಿಂದ ದುರ್ಮರಣ ಹೊಂದಿದ್ದಾರೆ.

ಅವರು ಗೋಕಾಕ್ ಪಟ್ಟಣದ ಎಸ್‌ಸಿ/ಎಸ್‌ಟಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯವಿದ್ದ ಸಂದರ್ಭದಲ್ಲಿ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಕ್ಷಣವೇ ಸಹೋದ್ಯೋಗಿಗಳು ವೈದ್ಯಕೀಯ ನೆರವಿಗೆ ಯತ್ನಿಸಿದರೂ, ಅವರು ಮೃತಪಟ್ಟಿದ್ದಾರೆಂದು ದೃಢಪಟ್ಟಿದೆ.

ಮೃತದೇಹವನ್ನು ಮುಂದಿನ ಕಾರ್ಯಾಚರಣೆಗಾಗಿ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

- Advertisement -

Latest Posts

Don't Miss