- Advertisement -
Sandalwood: ಕಿರುತೆರೆ ನಟಿ ಅಮೂಲ್ಯಾ ಗೌಡ ಕರ್ನಾಟಕ ಟಿವಿಗೆ ಸಂದರ್ಶನ ನೀಡಿದ್ದು, ನೆಚ್ಚಿನ ನಟನಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಕಾಲಪಯಣದ ಬಗ್ಗೆ ಮಾತನಾಡಿರುವ ಅಮೂಲ್ಯ, ಬರೀ ನಟನೆ ಮಾತ್ರವಲ್ಲದೇ, ವಾಯ್ಸ್ ಡಬ್ಬಿಂಗ್, ಅಸಿಸ್ಟೆಂಟ್ ಡೈರೆಕ್ಟರ್ ಹೀಗೆ ಹಲವರು ಕೆಲಸಗಳನ್ನು ಮಾಡುತ್ತಿದ್ದಾರೆ. ಬಾಲ್ಯದಲ್ಲಿ ಮನೆಯಲ್ಲಿದ್ದಾಗ ಸಪ್ಪೆಯಾಗಿರುತ್ತಿದ್ದ ಅಮೂಲ್ಯ, ಶಾಲೆಗೆ ಹೋದಾಗ ಬಿಂದಾಸ್ ಆಗಿರುತ್ತಿದ್ದರಂತೆ. ನೃತ್ಯ, ಸಂಗೀತ, ನಾಟಕ ಎಲ್ಲದರಲ್ಲೂ ಮುಂದಿರುವ ಅಮೂಲ್ಯ ಲಾಯರ್ ಆಗಿರಬೇಕಿತ್ತು. ಆದರೆ ನಟಿಯಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಮಾತನಾಡಿರುವ ಅಮೂಲ್ಯ ಗೌಡ, ನಮ್ಮ ಬಾಸ್ ಅಂದ್ರೆ ಡಿ ಬಾಸ್, ದರ್ಶನ್ ಸರ್ ಥರಾ ಕಾಣುವವರು ತುಂಬ ಜನ ಇರುತ್ತಾರೆ. ಆದರೆ ಅವರ ರೀತಿ ಇರುವವರು ಯಾರೂ ಇಲ್ಲಾ ಎಂದಿದ್ದಾರೆ.
ಇವರ ಪೂರ್ತಿ ಸಂದರ್ಶನ ನೋಡಲು ಈ ವೀಡಿಯೋ ಕ್ಲಿಕ್ ಮಾಡಿ.
- Advertisement -