ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ವತಿಯಿಂದ ಮೈಸೂರಿನಲ್ಲಿ ಆಯೋಜಿಸಿರುವ ಸಾಧನಾ ಸಮಾವೇಶ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಜುಲೈ 19 ರಂದು ಮೈಸೂರಲ್ಲಿ ಸಾಧನಾ ಸಮಾವೇಶ ನಿಗದಿ ಮಾಡಿದೆ. ಬರೀ ಉಡಾಫೆ ಮಾತಾಡುತ್ತಾ? ಡಿಕೆ ಶಿವಕುಮಾರ್ ಅವರನ್ನು ಹದ್ದು ಬಸ್ತಿನಲ್ಲಿ ಇಡೋಕೆ ತಂತ್ರ ಮಾಡಿದ್ದೆ ನಿಮ್ಮ ಸಾಧನೆ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಸಿಎಂ ಗೆ ಹ್ಯಾಟ್ಸ್ ಆಫ್. ಎರಡೂವರೆ ವರ್ಷದಿಂದ ಏನೇನೂ ಸಾಧನೆ ಮಾಡದೆ ಸಾಧನಾ ಸಮಾವೇಶ ಮಾಡುತ್ತಿರುವ ಇವರ ಭಂಢತನಕ್ಕೆ ಹ್ಯಾಟ್ಸ್ ಆಫ್ ಎಂದು ಲೇವಡಿ ಮಾಡಿದ್ದಾರೆ. ಮೈಸೂರಿಗೆ ಸಿಎಂ ಏನೂ ಕೊಟ್ಟಿದ್ದಾರೆ ? ಏನ್ ಸಾಧನೆ ಹೇಳಿ? ಎರಡೂವರೆ ವರ್ಷದಲ್ಲಿ ನಿಮ್ಮ ಕೆಲಸ ಏನೂ ಹೇಳಿ ಸಿಎಂ? ಮದುವೆಗೆ -ಮುಂಜಿಗೆ ಮೈಸೂರಿಗೆ ಬಂದಿದ್ದೇ ಸಿಎಂ ಸಾಧನೆನಾ? ಏಳೂವರೆ ವರ್ಷ ಸಿಎಂ ಆದರೂ ಮೈಸೂರಿಗೆ ಒಂದು ಸರಿಯಾದ ದಿಕ್ಕು ತೋರಿಸಿಲ್ಲ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಕುರ್ಚಿ ಬಿಟ್ಟು ಕೊಡದೆ ಇರುವುದೆ ನಿಮ್ಮ ಸಾಧನೆ ಎಂದು ವ್ಯಂಗ್ಯವಾಡಿದ್ದಲ್ಲದೆ, ಮೈಸೂರಲ್ಲಿ ಫಿಲಂ ಸಿಟಿ ಮಾಡಿದ್ರಾ? ಪ್ರವಾಸೋದ್ಯಮ ಸರ್ಕ್ಯೂಟ್ ಆಯ್ತಾ? ಎಲ್ಲದರ ದರ ಜಾಸ್ತಿ ಮಾಡಿದ್ದೆ ನಿಮ್ಮ ಸಾಧನೆ ಎಂದು ಕೆಂಡವಾಗಿದ್ದಾರೆ. ಯಾವ ಕೆಲಸವೂ ಮಾಡಿಲ್ಲ. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಹೋರಾಟ ಮಾಡುತ್ತಾ, ರಾಜಣ್ಣ, ಜಾರಕಿಹೊಳಿ, ಶಾಮನೂರು, ಮಹದೇವನನ್ನು ಡಿಕೆ ಶಿವಕುಮಾರ್ ವಿರುದ್ಧ ಎತ್ತಿ ಕಟ್ಟಿದ್ದೆ ಸಿಎಂ ಸಾಧನೆ ಎಂದು ಮಾಜಿ ಸಂಸದ ಟೀಕಾಪ್ರಹಾರ ನಡೆಸಿದ್ದಾರೆ.