Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ“ಂಡಿದ್ದಾರೆ.
ಕಾಣೋಕ್ಕೆ ಚಿಕ್ಕ ಹುಡುಗಿಯಂತಿರೋ ಲಾವಣ್ಯಾ ಮದುವೆ ಆಗ್ತಿದ್ದಾರೆ ಅಂತಾ ಹೇಳಿದಾಗ, ಸಿರಿಯಲ್ ಸೆಟ್‌ನಲ್ಲಿ ಯಾರಿಗೂ ನಂಬಿಕೆಯೇ ಬರಲಿಲ್ವಂತೆ. ಆದರೆ ಸಿರಿಯಲ್ ನಡೆಯುತ್ತಿರುವಾಗಲೇ, ಪ್ರೀತಿ ಇತ್ತು. ಆಮೇಲೆ ಗಡಿಬಿಡಿಯಲ್ಲಿ ಮದುವೆ ದಿನಾಂಕ ನಿಗದಿಯಾಗಿ, ಮದುವೆ ಆಯ್ತಂತೆ.
ಇನ್ನು ಲಾವಣ್ಯಾ ಅವರ ಪತಿ ಕೂಡ ಡೆಂಟಿಸ್ಟ್. ಡಾ. ಆಕಾಶ್. ಸ್ಕೈ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದಾರೆ. ಇದರದ್ದೇ ಬೆಂಗಳೂರಿನಲ್ಲಿ 3 ಬ್ರಾಂಚ್ ಇದ್ದು, ಸ್ವಂತ ಕ್ಲಿನಿಕ್‌ನಲ್ಲೇ ಪತಿ-ಪತ್ನಿ ಇಬ್ಬರೂ ಹಲ್ಲು ಕೀಳೋ ಕೆಲಸ ಮಾಡುತ್ತಿದ್ದಾರೆ.
ಆದರೆ ಇವರಿಬ್ಬರ ಮದುವೆಗೆ ಮನೆಯಲ್ಲಿ ಓಕೆ ಮಾಡಿಸೋದು ಸುಲಭದ ಮಾತಾಗಿರಲಿಲ್ಲ. ಮನೆಯಲ್ಲಿ ತುಂಬಾ ಮನವಿ ಮಾಡಿ ಮನವ“ಲಿಸಿದ ಬಳಿಕ, ಮದುವೆಗೆ ಅಪ್ಪ ಅಮ್ಮ ಓಕೆ ಅಂದಿದ್ದು ಅಂತಾರೆ ಡಾ.ಲಾವಣ್ಯ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.




