Thursday, August 21, 2025

Latest Posts

ಲಾಡ್ಕಿ ಬಹೀನ್ ಮಹಾ ವಂಚನೆ!‌ : ಮಹಾರಾಷ್ಟ್ರದಲ್ಲಿ “ಮಹಾ” ಗೋಲ್ಮಾಲ್!

- Advertisement -

ಬೆಂಗಳೂರು : ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್‌ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಲಾಡ್ಕಿ ಬಹೀನ್‌ ಯೋಜನೆ ಪ್ರಮುಖ ಪಾತ್ರವಹಿಸಿದೆ. ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ ಮಹಿಳೆಯರಿಗೆ ನೀಡಿದ್ದ ಭರವಸೆಯಂತೆಯೇ ಮೈತ್ರಿ ಸರ್ಕಾರ ಯೋಜನೆ ಜಾರಿಗೆ ತಂದಿದೆ.

ಆದರೆ ಇದೀಗ ಈ ಮಹತ್ವದ ಯೋಜನೆ ಹಳ್ಳ ಹಿಡಿದಿರುವುದನ್ನು ಸರ್ಕಾರವೇ ಬಯಲಿಗೆ ತಂದಿದೆ. ಮಹಿಳೆಯರಿಗಾಗಿಯೇ ಘೋಷಿಸಲಾಗಿರುವ ಈ ಯೋಜನೆಯಲ್ಲಿ ಮಹಾ ವಂಚನೆ ನಡೆದಿದೆ. ಇದೇ ವಿಚಾರಕ್ಕೆ ಫಡ್ನವೀಸ್‌ ಸರ್ಕಾರ ಇದೀಗ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಈ ಯೋಜನೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆಗಾಗಿ ವಿಪಕ್ಷಗಳು ಪಟ್ಟು ಹಿಡಿದಿವೆ.

ಇನ್ನೂ 2.5 ಲಕ್ಷ ಕಡಿಮೆ ಆದಾಯದ 21 ರಿಂದ 65 ವರ್ಷ ವಯಸ್ಸಿನ ಮಹಿಳೆಯರ ಖಾತೆಗೆ ಮಾಸಿಕ 1,500 ರೂಪಾಯಿ ಜಮೆ ಮಾಡುವ ಯೋಜನೆಯಾಗಿದೆ. ಕಳೆದ 10 ತಿಂಗಳಲ್ಲಿ 14,298 ಪುರುಷರ ಖಾತೆಗೆ 21.44 ಕೋಟಿ ರೂಪಾಯಿ ಜಮೆಯಾಗಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಲೆಕ್ಕಪರಿಶೋಧನೆಯಿಂದ ತಿಳಿದುಬಂದಿದೆ.

ಇನ್ನೂ ಈ ಬಗ್ಗೆ ಮಾತನಾಡಿರುವ ಹಣಕಾಸು ಸಚಿವ ಹಾಗೂ ಡಿಸಿಎಂ ಅಜಿತ್‌ ಪವಾರ್‌ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಲಾಭ ಪಡೆದ ಪುರುಷರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಬಡ ಕುಟುಂಬದ ಮಹಿಳೆಯರಿಗಾಗಿ ಈ ಯೋಜನೆ ತರಲಾಗಿದೆ. ಆದರೆ ಪುರುಷರು ಹೀಗೆ ಲಾಭ ಪಡೆದಿರುವುದು ಅಪರಾಧವಾಗಿದೆ. ಅವರಿಂದ ಯೋಜನೆಯ ಹಣವನ್ನು ವಸೂಲಿ ಮಾಡುತ್ತೇವೆ ಎಂದು ಪವಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ : ಭಾರತವೆನ್ನುವುದು ಪುಣ್ಯಕ್ಷೇತ್ರ : ಅಕ್ಷಯ ಗೋಖಲೆ ಕಾರ್ಗಿಲ್ ವಿಜಯ ದಿವಸ ‘ಮೌಲ್ಯಸುಧಾ’ದಲ್ಲಿ ಅಭಿಮತ

ಕಳೆದ ಜೂನ್‌ ತಿಂಗಳಿನಿಂದ ಲಾಡ್ಕಿ ಬಹೀನ್‌ ಯೋಜನೆಯ ಅಡಿಯಲ್ಲಿ 26.34 ಲಕ್ಷ ಫಲಾನುಭವಿಗಳನ್ನು ಪತ್ತೆ ಹಚ್ಚಲಾಗಿದೆ. ಹೀಗಾಗಿ ಆ ತಿಂಗಳ ಕಂತಿನಿಂದ ಅವರೆಲ್ಲರನ್ನೂ ಅಮಾನತುಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಅದಿತಿ ತತ್ಕರೆ ಮಾಹಿತಿ ನೀಡಿದ್ದಾರೆ.

ಈಗಾಗಲೇ 26.34 ಲಕ್ಷ ಫಲಾನುಭವಿಗಳು ಲಾಡ್ಕಿ ಬಹೀನ್‌ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ವರದಿಯ ಆಧಾರದಲ್ಲಿ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತತ್ಕರೆ ತಿಳಿಸಿದ್ದಾರೆ. ಪರಿಶೀಲನೆಯ ಬಳಿಕ ಅರ್ಹರಾದ ಫಲಾನುಭವಿಗಳಿಗೆ ಮತ್ತೆ ಯೋಜನೆಯನ್ನು ಮುಂದುವರೆಸುತ್ತೇವೆ. ಆದರೆ ವಾಮ ಮಾರ್ಗದಲ್ಲಿ ಸರ್ಕಾರಕ್ಕೆ ವಂಚಿಸಿ ಯೋಜನೆಯ ಲಾಭ ಪಡೆದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ವಾರ್ನ್‌ ಮಾಡಿದ್ದಾರೆ.

ಸರ್ಕಾರ ನಿಗದಿ ಪಡಿಸಿರುವ ವಯಸ್ಸಿನ ಮಿತಿಯನ್ನೂ ಮೀರಿ 65 ವರ್ಷಕ್ಕಿಂತ ಮೇಲ್ಪಟ್ಟವರೂ ಕೂಡ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇನ್ನೂ ಕೆಲವು ಕುಟುಂಬಗಳಲ್ಲಿ ಇಬ್ಬರಿಗಿಂತ ಅಧಿಕ ಜನರು ಲಾಭ ಪಡೆದಿರುವುದು ಬೆಳಕಿಗೆ ಬಂದಿದೆ ತಿಳಿಸಿದ್ದಾರೆ.

- Advertisement -

Latest Posts

Don't Miss