Political News: ಮಹಾಾರಾಷ್ಟ್ರದಲ್ಲಿ ಕೆಲ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತದ ಮೂಲಕ ಮತ್ತೆ ಅಧಿಕಾರಕ್ಕೆ ಬರಲು ಪ್ಲಾನ್ ಮಾಡಿದ್ದು ಎನ್ಸಿಪಿ ನಾಯಕ ಅಜೀತ್ ಪವಾರ್ ಹಾಗೂ ಶಿವಸೇನೆ ಅಧ್ಯಕ್ಷ ಏಕನಾಥ್ ಶಿಂಧೆಗೆ ಓಪನ್ ಆಗಿಯೇ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಆಫರ್ ನೀಡಿದೆ. ಅಲ್ಲದೇ, ಮೈತ್ರಿಯಾಗಿ ಸರ್ಕಾರ ರಚನೆಯಾದರೆ, ಸಿಎಂ ಪಟ್ಟ ಕೂಡ ಬಿಟ್ಟು ಕೊಡುವುದಾಗಿ ಹೇಳಿದೆ.
ಕಾಂಗ್ರೆಸ್ ಪಕ್ಷದ ನಾಯಕ ನಾನಾ ಪಟೋಲೆ ಅವರು ಮಾಧ್ಯಮದೊಂದಿಗೆ ಮಾತನಾಡಿದ್ದು, ಈ ವೇಳೆ ಶಿಂಧೆ ಮತ್ತು ಪವಾರ್‌ಗೆ ಕಾಂಗ್ರೆಸ್‌ಗೆ ಸೇರುವಂತೆ ಆಫರ್ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಏಕನಾಥ್ ಶಿಂಧೆ ಮತ್ತು ಅಜೀತ್ ಪವಾರ್ ಸ್ಥಿತಿ ತೀರಾ ಕೆಟ್ಟದ್ದಾಗಿದೆ. ತಮ್ಮ ಪಕ್ಷ ಹೇಳಹೆಸರಿಲ್ಲದಂತೆ ಹೋಗುವ ಭಯದಲ್ಲಿ ಈ ಇಬ್ಬರು ನಾಯಕರಿದ್ದಾರೆ ಎಂದು ನಾನಾ ಪಟೋಲೆ ಹೇಳಿದ್ದಾರೆ.
ಅಲ್ಲದೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಪಟೋಲೆ, ಬಿಜೆಪಿಗೆ ಯಾರು ಬೆಂಬಲಿಸುತ್ತಾರೋ, ಆ ಪಕ್ಷವನ್ನು ರಾಜಕೀಯ ಮುಗಿಸುವ ಪ್ರಯತ್ನ ಬಿಜೆಪಿ ಮಾಡುತ್ತದೆ. ಇದು ಬಿಜೆಪಿಯ ಮಾಮೂಲಿ ಚಾಳಿಯಾಗಿದೆ. ಅದು ತನ್ನ ಮಿತ್ರ ಪಕ್ಷಗಳನ್ನು ಚೆನ್ನಾಗಿರಲು ಬಿಡುವುದಿಲ್ಲ. ಶಿಂಧೆಯವರ ಶೀವಸೇನೆ ಪಕ್ಷವನ್ನು ಬಿಜೆಪಿ ಹಳಿ ತಪ್ಪಿಸಿದೆ. ಹಾಗಾಗಿ ಅಜೀತ್ ಪವಾರ್ ಮತ್ತು ಏಕನಾಥ್ ಶಿಂಧೆ ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಚಡಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಈ ಎರಡೂ ಪಕ್ಷಗಳೊಂದಿಗೆ ಸದಾ ಬೆಂಬಲಕ್ಕಿರುತ್ತದೆ ಎಂದು ಪಟೋಲೆ ಹೇಳಿದ್ದಾರೆ.
ಅಲ್ಲದೇ ಶಿಂಧೆ ಮತ್ತು ಪವಾರ್ ಸಿಎಂ ಆಗುವ ಆಸೆ ಹೊಂದಿದ್ದಾರೆ. ಹಾಗಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ, ಇಬ್ಬರಿಗೂ ಸಮವಾಗಿ ಸಿಎಂ ಆಗುವ ಅವಕಾಶ ಕೊಡಲಾಗುತ್ತದೆ. ಅಲ್ಲದೇ ಬಿಜೆಪಿಯವರಂತೆ ನಾವು ಇವರಿಬ್ಬರನ್ನೂ ಮೂಲೆಗುಂಪು ಮಾಡದೇ, ಬೆಂಬಲಿಸುತ್ತೇವೆ. ನಮ್ಮದು ರಾಷ್ಟ್ರೀಯ ಪಕ್ಷವಾಗಿರುವ ಕಾರಣ, ಇವರಿಬ್ಬರಿಗೂ ರಕ್ಷಣೆ ಸಿಗುತ್ತದೆ ಎಂದು ನಾನಾ ಪಟೋಲೆ ಕಾಂಗ್ರೆಸ್ ಪಕ್ಷಕ್ಕೆ ಆಮಂಂತ್ರಿಸಿದ್ದಾರೆ.
ಆದರೆ ಪಟೋಲೆ ನೀಡಿದ ಆಫರ್ ಬಗ್ಗೆ ಶಿಂಧೆ ಆಗಲಿ, ಪವಾರ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶಿಂಧೆಯವರನ್ನು ಮಹಾರಾಷ್ಟ್ರ ಸಿಎಂ ಪಟ್ಟದಿಂದ ಕೆಳಗಿಳಿಸಿ, ಮೈತ್ರಿ ಪಕ್ಷವಾಗಿರುವ ಬಿಜೆಪಿ ದೇವೇಂದ್ರ ಫಡ್ನವೀಸ್ ಅವರನ್ನು ಸಿಎಂ ಸೀಟ್ ಮೇಲೆ ಕೂರಿಸಿದೆ. ಹೀಗಾಗಿ ತನ್ನನ್ನು ಡಿಸಿಎಂ ಮಾಡಿದ್ದಕ್ಕೆ, ಶಿಂಧೆಗೆ ಬಿಜೆಪಿ ವಿರುದ್ಧ ಅಸಮಾಧಾನವಿದೆ ಎಂಬ ಗುಸುಗುಸು ಕೇಳಿ ಬರುತ್ತಿದೆ. ಇದೇ ಸಮಯದಲ್ಲಿ ಕಾಂಗ್ರೆಸ್ ನಾಯಕ ಈ ರೀತಿ ಆಫರ್ ನೀಡಿರುವುದು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿಯ ಯಾ ನಾಯಕರೂ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಆದರೆ ಪಕ್ಷೇತರ ನಾಯಕರಾಗಿರುವ ಬಚ್ಚಕಾಡು ಎಂಬ ರಾಜಕಾರಣಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಇವರು ಕಾಂಗ್ರೆಸ್‌ಗೆ ಬರಲು ಶಿಂಧೆ ಮತ್ತು ಪವಾರ್ ಅವರನ್ನು ಆಮಂತ್ರಿಸುತ್ತಿದ್ದಾರಲ್ಲಾ, ಇವರ ಪಕ್ಷವೇನು ಸ್ಥಿರವಾಗಿ ಇದೆಯಾ..? ಬಿಜೆಪಿ ಪಕ್ಷ ಕೇಂದ್ರದಲ್ಲಿ ಇರುವವರೆಗೂ ಯಾರೂ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಎಲ್ಲರೂ ಜಾರಿ ನಿರ್ದೇಶನಾಲಯದ ಸಚೇತಾಕಾಜ್ಞೆಯ ಬಗ್ಗೆ ಭೀತಿ ಹೊಂದಿದ್ದಾರೆ.