ಮನೆಯಲ್ಲಿ ಅತೀ ಪವಿತ್ರವಾದ ಸ್ಥಳ ಅಂದರೆ ದೇವರ ಕೋಣೆ. ಅಲ್ಲಿ ಕಾಲಿಡುವಾಗ ಮಡಿ ಮೈಲಿಗೆಯಿಂದ ಹೋಗಿ, ದೇವರನ್ನ ಪೂಜಿಸಿ ಬರ್ತೇವೆ. ಅಂಥ ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡುವುದು ನಿಷಿದ್ಧ ಎನ್ನಲಾಗಿದೆ. ಯಾವುದು ಆ ವಸ್ತು ಅನ್ನೋದನ್ನ ಇವತ್ತು ನಾವು ತಿಳಿಯೋಣ.

ದೇವರಿಗೆ ಹಾಕಿದ ಹೂವನ್ನು ತುಂಬಾ ದಿನಗಳ ಕಾಲ ಹಾಗೇ ಇಡಬಾರದು. ಒಂದು ದಿನದ ಬಳಿಕ ಆ ಹೂವನ್ನು ತೆಗೆದು ಹೊಸ ಹೂವನ್ನು ಹಾಕಬೇಕು. ಇಲ್ಲವಾದರೆ ಮನೆಗೆ ಒಳ್ಳೆಯದಲ್ಲ. ಇನ್ನು ಮನೆಯಲ್ಲಿ ಉಗ್ರ ಸ್ವರೂಪಿ ಫೋಟೋ ಅಥವಾ ಮೂರ್ತಿಯನ್ನ ಇಟ್ಟುಕೊಳ್ಳಬಾರದು. ಇದರಿಂದ ಆ ಮನೆಯವರ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಸಂಭವಿಸುತ್ತದೆ.
ದೇವರ ಕೋಣೆಯಲ್ಲಿ 2 ರಿಂದ 3 ದೇವರ ಫೋಟೋಗಳಿದ್ದರೆ ಉತ್ತಮ. ಆದ್ರೆ ನಮ್ಮ ಮುಷ್ಠಿಗಿಂತ ದೊಡ್ಡ ವಿಗ್ರಹವನ್ನ ದೇವರ ಕೋಣೆಯಲ್ಲಿ ಇರಿಸಕೂಡದು. ಹಾಗೇನಾದ್ರೂ ಇದ್ದರೆ, ಅದಕ್ಕೆ ಮೂರು ಹೊತ್ತು ಮಡಿ ಮೈಲಿಗೆಯಿಂದ ಪೂಜೆ, ನೈವೇದ್ಯ, ಅಭಿಷೇಕ ಇತ್ಯಾದಿ ಆಗಬೇಕಾಗುತ್ತದೆ.
ಇನ್ನು ಕೆಲ ಫೋಟೋ ಮತ್ತು ಮೂರ್ತಿಗಳು ಮನೆಯಲ್ಲಿದ್ದರೆ, ಅದಕ್ಕೆ ಸಂಬಂಧಿಸಿದ ನಿಯಮ ಅನುಸರಿಸಿ ಪೂಜೆ ಮಾಡಬೇಕಾಗುತ್ತದೆ. ಯಾವುದಾದರೂ ಪುಣ್ಯಕ್ಷೇತ್ರಕ್ಕೆ ಹೋದಿರೆಂದು ಸಿಕ್ಕ ಸಿಕ್ಕ ದೇವರ ಫೋಟೋವೆಲ್ಲ ಮನೆಗೆ ತರಕೂಡದು. ಯಾಕಂದ್ರೆ ಕೆಲ ದೇವರುಗಳಿಗೆ ಇಂಥ ರೀತಿಯಲ್ಲೇ ಪೂಜೆ ನೆರವೇರಿಸಬೇಕು. ಇಂಥ ನೈವೇದ್ಯವನ್ನೇ ಇಡಬೇಕು ಅನ್ನೋ ನಿಯಮವಿದೆ. ಫೋಟೋ ತಂದು ದೇವರ ಕೋಣೆಯಲ್ಲಿಟ್ಟು, ಅಂಥ ನಿಯಮವನ್ನು ಅನುಸರಿಸಲಾಗದಿದ್ದರೆ, ನಿಮ್ಮ ಮನೆಗೆ ಕಷ್ಟ ಕಾರ್ಪಣ್ಯಗಳು ಬರುವುದು ಕಟ್ಟಿಟ್ಟ ಬುತ್ತಿ.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888




