ಒಂದು ಕಾಲಕ್ಕೆ ಕುಚಿಕು ದೋಸ್ತಿಗಳಾಗಿದ್ದವರು ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಜೆಡಿಎಸ್ ಶಾಸಕ ಸುರೇಶ್ ಬಾಬು ವಾರ್ ಶುರುವಾಗಿದೆ. ಇವರಿಬ್ಬರ ಮಧ್ಯೆ ಏನೋ ಗಲಾಟೆಯಾಗಿದೆ ಎಂಬ ವಿಡೀಯೋ, ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.
ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರದ ವೇಳೆ, ಮಾಧುಸ್ವಾಮಿ ಸ್ಥಾನವನ್ನು ಸುರೇಶ್ ಬಾಬು ತುಂಬಿದ್ದರು. ಸ್ನೇಹಿತನಿಗಾಗಿ ಹಗಲು-ರಾತ್ರಿ ದುಡಿದಿದ್ದರು. ಬಳಿಕ ಸೋಮಣ್ಣ ಗೆದ್ದು ಕೇಂದ್ರ ಸಚಿವರಾದ್ರು. ಅದೇ ಖುಷಿಯಲ್ಲಿ ಸುರೇಶ್ ಬಾಬುರನ್ನ ತಬ್ಬಿಕೊಂಡು, ಮುತ್ತು ಕೊಟ್ಟು ಕಣ್ಣೀರು ಹಾಕಿದ್ರು. ಸನ್ಮಾನವನ್ನೂ ಮಾಡಿದ್ರು.
ಆದ್ರೀಗ ಗೆಲುವಿಗೆ ಕಾರಣನಾದ ಸುರೇಶ್ ಬಾಬು ಜೊತೆ, ಸೋಮಣ್ಣ ನಡೆದುಕೊಂಡು ರೀತಿ ವ್ಯಾಪಕ ಟೀಕೆಗೆ ಒಳಗಾಗಿದೆ. ಚಿಕ್ಕನಾಯಕನಹಳ್ಳಿ ಕಾರ್ಯಕ್ರಮದಲ್ಲಿ ಸೋಮಣ್ಣ ಭಾಗಿಯಾಗಿದ್ರು. ಈ ವೇಳೆ ಯಾವುದೋ ಕೆಲಸದ ಪತ್ರವನ್ನು ಕಾರ್ಯಕರ್ತರ ಬಳಿ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಓದಿದ ಸೋಮಣ್ಣ, ವೇದಿಕೆ ಮೇಲೆಯೇ ಕ್ಲಾಸ್ ತೆಗೆದುಕೊಂಡಿದ್ರು.
ನಿಮ್ಮ ಬಾಬು ನಿಮ್ಮ ಎಂಎಲ್‌ಎ ಅಷ್ಟೇ. ಅವರನ್ನು ನೀವು ನಾಲ್ಕು ಬಾರಿ ಗೆಲ್ಲಿಸಿದ್ದೀರಾ. ನಿಮ್ಮ ಹತ್ತಿರ ಯಾವುದೇ ಪಾರ್ಟಿ ಇಲ್ಲ. ಪಕ್ಷಕ್ಕಿಂತ ಯಾರೂ ಕೂಡ ದೊಡ್ಡವರಲ್ಲ. ಕಾರ್ಯಕ್ರಮಕ್ಕೆ ಮೊದಲು ಬರಲಿ ಅಂತಾ ಸಿಡಿಮಿಡಿಗೊಂಡಿದ್ರು.
ವಿ. ಸೋಮಣ್ಣರವರ ಈ ನಡವಳಿಕೆ, ಸುರೇಶ್ ಬಾಬು ಅಭಿಮಾನಿಗಳು, ಬೆಂಬಲಿಗರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಅಂದು ಸಾಮಾನ್ಯ ಸೋಮಣ್ಣನ ಮುಖ – ಇಂದು ಕೇಂದ್ರ ಸಚಿವರಾದಾಗ ಒಂದು ಪತ್ರಕ್ಕೆ ಗರಂ ಆದ ಸೋಮಣ್ಣನ ಮುಖ ಅಂತಾ, ವೀಡಿಯೋ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

