ಮನೆಯಂಗಳದಲ್ಲಿರುವ ತುಳಸಿಗಿಡ ಸಮೃದ್ಧವಾಗಿ ಬೆಳೆದಷ್ಟು ನಮ್ಮ ಜೀವನವೂ ಕೂಡ ಸಮೃದ್ಧವಾಗಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ತುಳಸಿ ಗಿಡ ಚೆನ್ನಾಗಿದ್ರೂ ಕೆಲವರ ಜೀವನ ಚೆನ್ನಾಗಿರಲ್ಲ. ಇದಕ್ಕೆ ಕೆಲ ಕಾರಣಗಳಿದೆ. ತುಳಸಿ ಗಿಡ ಚೆನ್ನಾಗಿ ಬೆಳೆದು ನಿಮ್ಮ ಜೀವನ ಕೂಡ ಚೆನ್ನಾಗಿರಬೇಕು ಅನ್ನೋ ಆಸೆ ನಿಮಗಿದ್ದರೆ, ಕೆಲ ವಸ್ತುಗಳನ್ನ ತುಳಸಿ ಕಟ್ಟೆ ಬಳಿ ಇರಿಸಕೂಡದು. ಯಾವುದು ಆ ವಸ್ತುಗಳು ಅನ್ನೋದು ನಾವಿವತ್ತು ನಿಮಗೆ ಹೇಳಲಿದ್ದೇವೆ.

ಕೆಲವರ ಮನೆಯಲ್ಲಿ ತುಳಸಿ ಗಿಡ ಎಷ್ಟು ಸೊಗಸಾಗಿ ಬೆಳೆದಿರುತ್ತೆ ಅಂದ್ರೆ ಆ ಮನೆಯವರು ಸುಖ ಶಾಂತಿ ನೆಮ್ಮದಿಯಿಂದ ಇರುತ್ತಾರೆ ಎಂದೆನಿಸುತ್ತದೆ. ಆದ್ರೆ ಆ ಮನೆಯಲ್ಲಿ ಸುಖ ಶಾಂತಿ ಇರುವುದೇ ಇಲ್ಲ. ಯಾಕಂದ್ರೆ ತುಳಸಿ ಗಿಡದ ಬಳಿ ಅವರು ಇಡುವ ಕೆಲ ವಸ್ತುಗಳೇ ಇದಕ್ಕೆ ಕಾರಣವಾಗಿರುತ್ತದೆ.
ಸಂಜೆ ತುಳಸಿಗಿಡದ ಬಳಿ ದೀಪ ಹಚ್ಚುವುದು ಹಿಂದೂಗಳ ಪದ್ಧತಿಯಲ್ಲಿ ಒಂದು. ಹೀಗೆ ದೀಪ ಹಚ್ಚಿದಾಗ, ಅದು ನಂದಿಹೋದ ತಕ್ಷಣ ಅದನ್ನ ತಂದು ಮನೆಯೊಳಗಿರಿಸಬೇಕು. ದೀಪ ನಂದಿಹೋದರೂ ತುಳಸಿ ಗಿಡದ ಕೆಳಗೆ ಖಾಲಿ ದೀಪವನ್ನ ಇರಿಸಕೂಡದು.
ಅಲ್ಲದೇ, ಬೆಳಿಗ್ಗೆ ಸ್ನಾನದ ಬಳಿಕ ತುಳಸಿ ಗಿಡಕ್ಕೆ ಪೂಜೆ ಮಾಡುವ ವೇಳೆ ತಾಮ್ರದ ಕಲಶದಲ್ಲಿ ತುಳಸಿಗೆ ನೀರು ಹಾಕಲಾಗುತ್ತದೆ. ಈ ಸಮಯ ಖಾಲಿಯಾದ ಕಲಶವನ್ನ ನೆನಪಿನಿಂದ ತಂದು ಒಳಗಿರಿಸಿ. ಅಪ್ಪಿ ತಪ್ಪಿಯೂ ಖಾಲಿ ತಂಬಿಗೆಯನ್ನ ತುಳಸಿ ಗಿಡದ ಬಳಿ ಇಡಬೇಡಿ. ಇನ್ನು ತುಳಸಿ ಗಿಡದ ಬಳಿ ಪ್ರಸಾದದ ಬೌಲನ್ನಿರಿಸಿದ್ದರೆ, ಪ್ರಸಾದ ಖಾಲಿಯಾದ ಬಳಿಕ ಬೌಲ್ ತೆಗೆದುಬಿಡಿ.
ಇನ್ನು ತುಳಸಿ ಕಟ್ಟೆ ಬಳಿ ಒಗೆದ ಬಟ್ಟೆ ಒಣಗಿಸಬೇಡಿ. ಆ ಬಟ್ಟೆ ತುಳಸಿ ಗಿಡಕ್ಕೆ ತಾಕಿದರೆ ಅಥವಾ ಅದರ ನೀರು ತುಳಸಿ ಗಿಡಕ್ಕೆ ತಾಕಿದರೆ, ತುಳಸಿ ಗಿಡ ಸಮೃದ್ಧವಾಗಿ ಬೆಳೆಯಲು ಸಾಧ್ಯವೇ ಇಲ್ಲ.

ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..




