Friday, November 28, 2025

Latest Posts

ಆನಂದ ಮತ್ತು ಆರೋಗ್ಯಕರ ಜೀವನಕ್ಕಾಗಿ ಹೆಲ್ತ್ ಟಿಪ್ಸ್..!

- Advertisement -

ನಮಗೇನಾದ್ರೂ ಆರೋಗ್ಯ ಸರಿಯಾಗಿ ಇಲ್ಲದಿದ್ರೆ, ಆಗ ನಾವು ಇನ್ಮೇಲೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಅಂತಾ ನಿರ್ಧಾರ ಮಾಡ್ತೇವೆ. ಆದ್ರೆ ಅನಾರೋಗ್ಯಕ್ಕೀಡಾಗೋ ಮುನ್ನವೇ ಆರೋಗ್ಯದ ಬಗ್ಗೆ ಗಮನ ಕೊಟ್ರೆ ಇನ್ನೂ ಒಳ್ಳೆಯದು. ಹಾಗಾಗಿ ಇವತ್ತು ನಾವು 5 ಆರೋಗ್ಯಕರ ಟಿಪ್ಸ್‌ನ್ನ ನಿಮಗೆ ನೀಡಲಿದ್ದೇವೆ.

ಮೊದಲನೇಯದ್ದು ಮಲಗುವಾಗ ಎಡಗಡೆ ಮುಖಮಾಡಿ ಮಲಗಿ. ಬಲಗಡೆ ಮುಖ ಮಾಡಿ ಮಲಗುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಎಡಗಡೆ ಮುಖಮಾಡಿ ಮಲಗುವುದು ಉತ್ತಮ.

ಎರಡನೇಯದ್ದು, ಹೆಚ್ಚೆಚ್ಚು ನೀರು ಕುಡಿಯಬೇಕು. ಕೆಲಸದ ಒತ್ತಡದ ಮಧ್ಯೆ ನೀರು ಕುಡಿಯುವುದನ್ನ ನಾವು ಮರೆತೇ ಬಿಡುತ್ತೇವೆ. ಆದ್ರೆ ಪ್ರತಿದಿನ ಚೆನ್ನಾಗಿ ನೀರು ಕುಡಿಯುವುದರಿಂದ ಹಲವು ಖಾಯಿಲೆಯಿಂದ ನಾವು ಮುಕ್ತಿ ಪಡೆಯುತ್ತೇವೆ. ಆದ್ರೆ ನೀರು ಶುದ್ಧವಾಗಿರಬೇಕು.

ಮೂರನೇಯದ್ದು, ವಾಹನದ ಮೇಲೆ ಅವಲಂಬಿತರಾಗಿರದೇ, ನಡಿಯುವುದನ್ನ ಕಲಿಯಿರಿ. ದೊಡ್ಡ ದೊಡ್ಡ ಸಿಟಿಗಳಲ್ಲಿ ಅಕ್ಕ ಪಕ್ಕದ ಏರಿಯಾಗಳಿಗೆ ಹೋಗುವುದಿದ್ದರೂ ಕೆಲವರು ಬೈಕ್ ಸ್ಕೂಟಿ ಬಳಸುತ್ತಾರೆ. ಇದರಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ದಿನಕ್ಕೆ ಕೆಲ ನಿಮಿಷಗಳ ಕಾಲವಾದ್ರೂ ನಾವು ವಾಕ್ ಮಾಡಬೇಕು.

ನಾಲ್ಕನೇಯದ್ದು, ಆಯುರ್ವೇದದ ಪ್ರಕಾರ ನಾವು ಸೇವಿಸುವ ಆಹಾರವನ್ನು ಚೆನ್ನಾಗಿ ಅಗಿದು ತಿಂದರಷ್ಟೇ ಅದು ನಮ್ಮ ದೇಹಕ್ಕೆ ಅವಶ್ಯಕವಾದ ಶಕ್ತಿ ಕೊಡುತ್ತದೆ. ಇಲ್ಲದಿದ್ದರೆ ಬರೀ ಬಾಯಿ ರುಚಿಗೆ ತಿಂದಂತಾಗಿ, ಅದರಿಂದ ದೊರೆಯಬೇಕಾದ ಪೋಷ್ಠಿಕಾಂಶ ದೊರೆಯುವದಿಲ್ಲ ಆದ್ದರಿಂದ ಆಹಾರವನ್ನು ಅಗಿದು ತಿನ್ನಬೇಕು.

ನಿಮ್ಮ ಸುತ್ತಮುತ್ತಲಿನ ವಾತಾವರಣ ಚೆನ್ನಾಗಿರಲಿ. ಅಂದರೆ ನಿಮ್ಮ ಗೆಳೆಯರು ಹೆಲ್ತ್ ಕಾನ್ಶಿಯಸ್ ಇದ್ರೆ ತುಂಬಾನೇ ಒಳ್ಳೆಯದು. ನಮ್ಮ ಸುತ್ತ ಮುತ್ತಲಿನವರು ಸೋಂಬೇರಿ, ಜಂಕ್ ಫುಡ್ ಪ್ರಿಯರು ಇದ್ದರೆ, ನಾವು ಕೂಡ ಅವರಂತೆ ಆಗಿಬಿಡ್ತೀವಿ. ಈ ಕಾರಣಕ್ಕೆ ಹೆಲ್ದಿಯಾಗಿರಲು ಇಷ್ಟಪಡುವವರ ಜೊತೆಗಿದ್ದರೆ ನಾವು ಕೂಡ ನಮ್ಮ ಆರೋಗ್ಯದ ಬಗ್ಗೆ ಗಮನ ಕೊಡಲು ಸಹಕಾರಿಯಾಗುತ್ತದೆ.

- Advertisement -

Latest Posts

Don't Miss