Recipe: ಭಾರತೀಯ ಶೈಲಿಯ ಮ್ಯಾಕ್ರೋನಿ ಪಾಸ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2 ಕಪ್ ಮ್ಯಾಕ್ರೋನಿ, 4 ಸ್ಪೂನ್ ಎಣ್ಣೆ, ಬೆಣ್ಣೆ, 5ರಿಂದ 6 ಎಸಳು ಬೆಳ್ಳುಳ್ಳಿ, 2 ಈರುಳ್ಳಿ, 2 ಟೋಮೆಟೋ,1 ಚಿಕ್ಕ ಬೌಲ್, ಕ್ಯಾರೆಟ್- ಕ್ಯಾಪ್ಸಿಕಂ-ಕಾರ್ನ್ ಮಿಶ್ರಣ, ಶುಂಠಿ, 1 ಸ್ಪೂನ್ ಖಾರದ ಪುಡಿ, ಚಿಲ್ಲಿ ಸಾಸ್, ಶೆಜ್ವಾನ್ ಸಾಸ್, ಟೋಮೆಟೋ ಸಾಸ್, ಬ್ಲಾಕ್ ಪೆಪ್ಪರ್, ಆರೆಗ್ಯಾನೋ, ಗರಂಮಸಾಲೆ, ಉಪ್ಪು.

ಮಾಡುವ ವಿಧಾನ: 1 ಪಾತ್ರೆಗೆ ನೀರು, ಉಪ್ಪು ಎಣ್ಣೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಮ್ಯಾಕ್ರೋನಿ ಹಾಕಿ, ಬೇಯಿಸಿ. ಮ್ಯಾಕ್ರೋನಿ ಹೆಚ್ಚು ಬೇಯಬಾರದು. ಕಡಿಮೆಯೂ ಬೇಯಬಾರದು. ಸರಿಯಾಗಿ ಬೇಯಬೇಕು.

ನಂತರ ಬೇಯಿಸಿದ ನೀರನ್ನು ಸೋಸಿ, ಮ್ಯಾಕ್ರೋನಿ ಬೇರೆ ಮಾಡಿ. ಬಳಿಕ ಮ್ಯಾಕ್ರೋನಿಯನ್ನು ತಣ್ಣೀರಿನಿಂದ ವಾಶ್ ಮಾಡಿ. ಬಳಿಕ ಮ್ಯಾಕ್ರೋನಿಗೆ 2 ಸ್ಪೂನ್ ಆಲಿವ್ ಎಣ್ಣೆ ಅಥವಾ ಅಡುಗೆ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ. ಆಗ ಮ್ಯಾಕ್ರೋನಿ ಬಿಡಿ ಬಿಡಿಯಾಗಿರುತ್ತದೆ.

ಈಗ 1 ಪ್ಯಾನ್‌ಗೆ ಎಣ್ಣೆ ಮತ್ತು ಬೆಣ್ಣೆ ಎರಡೂ ಹಾಕಿ. ಬಿಸಿಯಾದ ಬಳಿಕ ಇದಕ್ಕೆ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ, ಈರುಳ್ಳಿ, ಸಣ್ಣಗೆ ತುಂಡರಿಸಿದ ಶುಂಠಿ, ಖಾರದ ಪುಡಿ, ಅರಿಶಿನ, ಟೋಮೆಟೋ ಹಾಕಿ ಬಾಡಿಸಿ.

ಬಳಿಕ ಆಗಲೇ ಮ್ಯಾಕ್ರೋನಿ ಬೇಯಿಸಿದ ನೀರನ್ನು ಈಗ ಈ ಮಿಶ್ರಣಕ್ಕೆ ಹಾಕಬೇಕು. ಬಳಿಕ 5 ನಿಮಿಷ ಮುಚ್ಚಳ ಮುಚ್ಚಿಡಿ. ಈಗ ಕ್ಯಾಪ್ಸಿಕಂ, ಕ್ಯಾರೆಟ್, ಕಾರ್ನ್, ಹಾಕಿ ಮಿಕ್ಸ್ ಮಾಡಿ. ಬಳಿಕ ಚಿಲ್ಲಿ ಸಾಸ್, ಶೆಜ್ವಾನ್ ಸಾಸ್, ಟೋಮೆಟೋ ಸಾಸ್, ಅವಶ್ಯಕತೆ ಇದ್ದಲ್ಲಿ ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ.

ಬಳಿಕ ಬ್ಲಾಕ್ ಪೆಪ್ಪರ್, ಆರೆಗ್ಯಾನೋ, ಗರಂಮಸಾಲೆ, ಬೇಯಿಸಿದ ಮ್ಯಾಕ್ರೋನಿಯನ್ನು ಇದಕ್ಕೆ ಸೇರಿಸಿ ಮಿಕ್ಸ್ ಮಾಡಿದ್ರೆ ದೇಸಿ ಮ್ಯಾಕ್ರೋನಿ ಪಾಸ್ತಾ ರೆಡಿ.

About The Author