Recipe: ಬೇಕಾಗುವ ಸಾಮಗ್ರಿ: ತುರಿದ ಅಥವಾ ಕತ್ತರಿಸಿದ ಪಪ್ಪಾಯಿ ಕಾಯಿ, 3 ಸ್ಪೂನ್ ಎಣ್ಣೆ, 1 ಸ್ಪೂನ್ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಕರಿಬೇವು, ಕಾಾಯಿತುರಿ, ಉಪ್ಪು, ಬೆಲ್ಲ, ಮೆಣಸು, ಹುಣಸೆ.
ಮಾಡುವ ವಿಧಾನ: ಮಿಕ್ಸಿ ಜಾರ್ಗೆ ಕಾಯಿತುರಿ, ಮೆಣಸು ಮತ್ತು ಜೀರಿಗೆ ಹಾಕಿ ತರಿ ತರಿಯಾಗಿ ರುಬ್ಬಿ. ಈಗ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು, ಹಾಕಿ ಹುರಿಯಿರಿ. ಬಳಿಕ ಪಪ್ಪಾಯಿ ಹಾಕಿ, ಮುಚ್ಚಳ ಮುಚ್ಚಿ ಹಬೆಯಲ್ಲೇ ಬೇಯಿಸಿ. ಅದಾದ ಬಳಿಕ ಉಪ್ಪು, ಬೆಲ್ಲ, ಹುಳಿ ಹಾಕಿ ಮಿಕ್ಸ್ ಮಾಡಿ, ಸರಿಯಾಗಿ ಬೆಂದು ಪಲ್ಯ ತಯಾರಾದ ಬಳಿಕ, ರುಬ್ಬಿದ ಕಾಯಿ ತುರಿ ಮಸಾಲೆ ಹಾಕಿ, 2 ನಿಮಿಷ ಮತ್ತೆ ಮುಚ್ಚಳ ಮುಚ್ಚಿ ಬೇಯಿಸಿದ್ರೆ, ಪಲ್ಯ ರೆಡಿ.




