Recipe: ಬೇಕಾಗುವ ಸಾಮಗ್ರಿ: 1 ಕಪ್ ಪನೀರ್, 50 ಗೋಡಂಬಿ, 4 ಸ್ಪೂನ್ ತುಪ್ಪ, 2 ಈರುಳ್ಳಿ, 1 ಟೋಮೆಟೋ, 4 ಸ್ಪೂನ್ ಎಣ್ಣೆ, 10 ಬೆಳ್ಳುಳ್ಳಿ ಎಸಳು- ಶುಂಠಿ- ಹಸಿಮೆಣಸು, 2 ಪಲಾವ್ ಎಲೆ, 1 ಸ್ಪೂನ್ ಜೀರಿಗೆ, ಏಲಕ್ಕಿ, ಲವಂಗ, ಕಾಳು ಮೆಣಸು, ಚಕ್ಕೆ, ಖಾರದ ಪುಡಿ, ಅರಿಶಿನ, ಉಪ್ಪು, ಗರಂ ಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ, ಕಸೂರಿ ಮೇಥಿ, ಉಪ್ಪು.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ ತುಪ್ಪ ಅಥವಾ ಬೆಣ್ಣೆ ಹಾಕಿ ಪನೀರನ್ನು ಮಂದ ಉರಿಯಲ್ಲಿ ಹುರಿಯಿರಿ. ಬಳಿಕ ಅದೇ ಪ್ಯಾನ್ನಲ್ಲಿ 30 ಗೋಡಂಬಿಯನ್ನೂ ಹುರಿಯಿರಿ.
ಈಗ 20 ಗೋಡಂಬಿಯನ್ನು ಬಿಸಿ ನೀರಿನಲ್ಲಿ 15 ನಿಮಿಷ ನೆನೆಸಿ. ನೆನೆಸಿದ ಕಾಜು, ಟೋಮೆಟೋ, ಹಾಕಿ ಪೇಸ್ಟ್ ತಯಾರಿಸಿ. ನಂತರ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಪಲಾವ್ ಎಲೆ, ಜೀರಿಗೆ, ಏಲಕ್ಕಿ, ಲವಂಗ, ಕಾಳು ಮೆಣಸು, ಚಕ್ಕೆ ಹಾಕಿ ಹುರಿಯಿರಿ. ನಂತರ ಈರುಳ್ಳಿ ಹಾಕಿ ಹುರಿಯಿರಿ.
ಬಳಿಕ ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ ಪೇಸ್ಟ್, ಖಾರದ ಪುಡಿ, ಅರಿಶಿನ, ಉಪ್ಪು, ಗರಂ ಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ, ಇವೆಲ್ಲ ಹಾಕಿ ಮಿಕ್ಸ್ ಮಾಡಿ. ನಂತರ ಕರ್ಡ್, ಆಗಲೇ ರೆಡಿ ಮಾಡಿದ್ದ ಗೋಡಂಬಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ.
ಅದರ ಮೇಲೆ ಎಷ್ಟು ಬೇಕೋ, ಅಷ್ಟು ನೀರು ಹಾಕಿ ಬೇಯಿಸಿ. ಈಗ ಹುರಿದಿದ್ದ ಪನೀರ್ ಮತ್ತು ಕಾಜು ಹಾಕಿ, ಕಸೂರಿ ಮೇಥಿ, ಕ“ತ್ತ“ಂಬರಿ ಸ“ಪ್ಪು ಹಾಕಿ ಮಿಕ್ಸ್ ಮಾಡಿ, 10 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿದ್ರೆ, ಕಾಜು ಪನೀರ್ ಮಸಾಲಾ ರೆಡಿ. ರೋಟಿ ಜತೆ ಉತ್ತಮ ಕಾಂಬಿನೇಷನ್.




