ಧರ್ಮಸ್ಥಳದ ಬಗ್ಗೆ ವಿಧಾನಸಭೆಯಲ್ಲಿ ಗುರುವಾರ ಮಹತ್ವದ ಚರ್ಚೆಯಾಗಿದೆ. ಗದ್ದಲ ಜೋರಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಟ್ಟಿಯಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದರು. My stand on ಧರ್ಮಸ್ಥಳ, My Believe is ಮಂಜುನಾಥ! ಹೀಗೆ ವಿಧಾನಸಭೆಯಲ್ಲಿ ಧರ್ಮಸ್ಥಳದ ಪರವಾಗಿ ಗಟ್ಟಿ ಧ್ವನಿಯಲ್ಲಿ ಘೋಷಿಸಿದ್ದಾರೆ.
ವಿಧಾನಸಭೆಯ ಕಲಾಪದ ವೇಳೆ ನಿಯಮ 69ರಡಿ ಧರ್ಮಸ್ಥಳ ಸಂಬಂಧಿತ ಚರ್ಚೆ ನಡೀತು. ಈ ಸಂದರ್ಭದಲ್ಲಿ ಸರ್ಕಾರದ ಮೇಲೆ ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದರು. ‘ಕರ್ನಾಟಕ ಸರ್ಕಾರ ಧಾರ್ಮಿಕ ಕ್ಷೇತ್ರಗಳನ್ನು ಮುಗಿಸಲು ಹುನ್ನಾರ ನಡೆಸುತ್ತಿದೆ’ ಎಂದು ಟೀಕಿಸಿದರು.
ಈ ಆರೋಪಗಳಿಗೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ನಮಗಿಂತ ಧರ್ಮಸ್ಥಳದ ಬಗ್ಗೆ ಜಾಸ್ತಿ ನಂಬಿಕೆ ಯಾರಿಗೂ ಇಲ್ಲ. ನಮ್ಮ ಪಕ್ಷದಲ್ಲೇ ಧರ್ಮಸ್ಥಳದ ಗೌರವಕ್ಕೆ ಹೆಚ್ಚು ಮಹತ್ವವಿದೆ. ಸರ್ಕಾರ ಧಾರ್ಮಿಕ ಕ್ಷೇತ್ರಗಳ ರಕ್ಷಣೆ ನೀಡಲು ಬದ್ಧವಾಗಿದೆ. ಧರ್ಮಸ್ಥಳ ಮತ್ತು ವೀರೇಂದ್ರ ಹೆಗಡೆ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ದಯವಿಟ್ಟು ಇದನ್ನು ರಾಜಕೀಯಗೊಳಿಸಬೇಡಿ, ಎಂದು ಮನವಿ ಮಾಡಿದರು.
ವಿಪಕ್ಷ ನಾಯಕ ಆರ್. ಅಶೋಕ್ ಸೌಜನ್ಯ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ, ಮಾಸ್ಕ್ ಮ್ಯಾನ್ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಗಂಭೀರವಾದ ತನಿಖೆ ಅಗತ್ಯವಿದೆ. ಮಂಜುನಾಥ ಕ್ಷೇತ್ರವೇನು ತಪ್ಪು ಮಾಡಿದೆ? ಧಾರ್ಮಿಕ ಸ್ಥಳಗಳ ಪಾವಿತ್ರತೆಗೆ ಧಕ್ಕೆಯೊಡ್ಡಲು ಸರ್ಕಾರ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.
ದೂರುದಾರರು ನೀಡಿದ ಮಾಹಿತಿ ತಪ್ಪಾಗಿದೆ. ಸುಜಾತ ಭಟ್ ಎಂಬ ಮಹಿಳೆ ಮಗಳು ಕಾಣೆಯಾಗಿದ್ದಾರೆ ಎಂದು ದೂರು ನೀಡಿದರೂ, ಅಂತಹ ವ್ಯಕ್ತಿಯೇ ಇಲ್ಲ ಎಂಬುದು ಬಳಿಕ ಬಹಿರಂಗವಾಯಿತು. ಮಾಸ್ಕ್ ಮ್ಯಾನ್‌ಗೆ ಸರಕಾರದಿಂದಲೇ ಭದ್ರತೆ ಒದಗಿಸಲಾಗುತ್ತಿದೆ. ಇದು ಸರ್ಕಾರ ಪ್ರಾಯೋಜಿತ ನಾಟಕವಾಗಿದೆ ಎಂದು ದೂರಿದರು.
ಅಷ್ಟೇ ಅಲ್ಲದೆ, ಪ್ರಕರಣವನ್ನು NIAಗೆ ಒಪ್ಪಿಸಿ ತನಿಖೆ ನಡೆಯಬೇಕು ಎಂಬ ಅವಶ್ಯಕತೆಯನ್ನು ಅಶೋಕ್ ಪುನರುಚ್ಛರಿಸಿದರು. ದೂರುದಾರರಿಗೆ ಮಂಪರು ಪರೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.