ಹಿಂದೂ ಧರ್ಮದ ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆಯಾದರೂ ಸತ್ಯನಾರಾಯಣ ಪೂಜೆ ಮಾಡೇ ಮಾಡಿರ್ತಾರೆ. ಅಥವಾ ಪೂಜೆಯಲ್ಲಿ ಭಾಗಿಯಾಗಿರ್ತಾರೆ. ಈ ಸತ್ಯನಾರಾಯಣ ಪೂಜೆಯನ್ನ ಜನ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡ್ತಾರೆ ಅನ್ನೋ ಮಾತಿದೆ. ಹಾಗಾದ್ರೆ ಯಾಕೆ ಪೂಜೆ ಮಾಡ್ತಾರೆ..? ಏನಿದರ ರಹಸ್ಯ ಅನ್ನೋದನ್ನ ನೋಡೋಣ.

ಶ್ರೀ ವಿಷ್ಣುವಿನ ಮತ್ತೊಂದು ರೂಪವೇ ಸತ್ಯನಾರಾಯಣ. ಈ ಪೂಜೆಗೆ ಸಂಬಂಧಿಸಿದ ಕಥೆ ಓದಿ, ಸಪಾತ ಪ್ರಸಾದ ಮಾಡಿ ನಾರಾಯಣನಿಗೆ ನೈವೇದ್ಯ ಮಾಡಿ, ಪ್ರಸಾದ ಹಂಚುವುದರ ಮೂಲಕ ಪೂಜೆ ಸಂಪನ್ನಗೊಳ್ಳುತ್ತೆ. ಈ ಪೂಜೆಯನ್ನ ಹೆಚ್ಚಾಗಿ ಮದುವೆ, ಮುಂಜಿ, ಗೃಹಪ್ರವೇಶ, ನಾಮಕರಣದ ಸಂದರ್ಭದಲ್ಲಿ ಅಥವಾ ಜೀವನದಲ್ಲಿ ಯಾವುದಾದರೂ ಕೆಲಸದಲ್ಲಿ ಯಶಸ್ಸು ಸಿಕ್ಕ ಬಳಿಕ ಸತ್ಯನಾರಾಯಣ ಪೂಜೆ ಮಾಡಲಾಗುತ್ತದೆ.
ಹಿಂದೂಪುರಾಣದಲ್ಲಿ ಈ ಬಗ್ಗೆ ಒಂದು ಕಥೆ ಇದೆ. ನಾರದ ಮುನಿಗಳು ಭೂಲೋಕದಲ್ಲಿ ಸಂಚರಿಸುವಾಗ ಮನುಷ್ಯರು ಪಡುವ ಕಷ್ಟ ನೋಡಿ ಮರುಕ ಪಟ್ಟು, ವಿಷ್ಣುವಿನ ಬಳಿ ಹೋಗಿ, ಭೂಲೋಕದ ಜನರ ಕಷ್ಟ ಪರಿಹರಿಸಲು ಕೇಳಿಕೊಂಡರಂತೆ. ಆಗ ಶ್ರೀ ಮಹಾವಿಷ್ಣುವು, ಭೂಲೋಕದ ಜನ ಸತ್ಯನಾರಾಯಣ ಪೂಜೆ ಮಾಡಿದ್ದಲ್ಲಿ ಅವರ ಕಷ್ಟಗಳೆಲ್ಲ ಪರಿಹಾರವಾಗುತ್ತದೆ ಎಂದನಂತೆ. ಇದನ್ನು ಕೇಳಿದ ನಾರದ ಮುನಿಗಳು ಭೂಲೋಕಕ್ಕೆ ಬಂದು ಜನರ ಕಷ್ಟಕ್ಕೆ ಪರಿಹಾರ ತಿಳಿಸಿದರು.
ಆದ್ದರಿಂದ ಸತ್ಯನಾರಾಯಣ ಪೂಜೆ ಮಾಡಿದಲ್ಲಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿ, ಅಭಿವೃದ್ಧಿ ಕಾಣುತ್ತದೆ ಎಂಬ ನಂಬಿಕೆ ಇದೆ. ಈ ಪೂಜೆಗೂ ಮುನ್ನ ಗಣಪತಿ ಪೂಜೆ, ನವಗ್ರಹ ಪೂಜೆ ಮಾಡಿ, ನಂತರ ಸತ್ಯನಾರಾಯಣ ಪೂಜೆ ಮಾಡುತ್ತಾರೆ.

ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..




