Recipe: ಕಾರ್ನ್ ಚೀಸ್ ಪಾಲಕ್ ಪರಾಠಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಪಾಲಕ್, 1 ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಸ್ವಲ್ಪ ಚೀಸ್, ಬೆಣ್ಣೆ, 1 ಕಪ್ ಗೋದಿಹುಡಿ, 1 ಸ್ಪೂನ್ ಜೀರಿಗೆ, ವೋಮ, ಅರಿಶಿನ, ಖಾರದ ಪುಡಿ, 2 ಸ್ಪೂನ್ ಎಣ್ಣೆ, ಸ್ವಲ್ಪ ಬೆಳ್ಳುಳ್ಳಿ, 3 ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಉಪ್ಪು.

ಮಾಡುವ ವಿಧಾನ: ಮಿಕ್ಸಿಂಗ್‌ ಬೌಲ್‌ನಲ್ಲಿ ಗೋದಿಹುಡಿ, ಜೀರಿಗೆ, ವೋಮ, ಉಪ್ಪು, ನೀರು, ಸಣ್ಣಗೆ ಹೆಚ್ಚಿದ ಪಾಲಕ್, ಎಣ್ಣೆ ಹಾಕಿ ಚಪಾತಿ ಹಿಟ್ಟು ತಯಾರಿಸಿ.

ಬಳಿಕ ಬ್ಲೆಂಡರ್ ಅಥವಾ ಚಾಪರ್‌ನಲ್ಲಿ ಬೇಯಿಸಿದ ಸ್ವೀಟ್ ಕಾರ್ನ್ ಹಾಕಿ, ತರಿ ತರಿಯಾಗಿ ರುಬ್ಬಿ. ಇದನ್ನು 1 ಬೌಲ್‌ಗೆ ಹಾಕಿ, ಇದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಉಪ್ಪು, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಅರಿಶಿನ, ಖಾರದ ಪುಡಿ, ತುರಿದ ಚೀಸ್ ಹಾಕಿ ಮಿಕ್ಸ್ ಮಾಡಿ. ಚೀಸ್‌ನಲ್ಲಿ ಉಪ್ಪು ಇದ್ದರೆ, ಉಪ್ಪು ಕಡಿಮೆ ಹಾಕಿ.

ಈಗ ಹೂರಣ ರೆಡಿ. ಚಪಾತಿ ಹಿಟ್ಟಿಗೆ, ಹೂರಣ ತುಂಬಿಸಿ. ಲಟ್ಟಿಸಿ, ಬೆಣ್ಣೆ ಹಾಕಿ ಹುರಿದರೆ, ಕಾರ್ನ್ ಚೀಸ್ ಪಾಲಕ್ ಪರಾಟಾ ರೆಡಿ.

About The Author