Hubli News: ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿಗಾಗಿ ಹಂತಕ ಫಯಾಜ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾನೆ. ಹುಬ್ಬಳ್ಳಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಛೀಮಾರಿ ಹಾಕಿದ್ರು ಇನ್ನೂ ಬುದ್ದಿ ಕಲಿಯದ ಹಂತಕ ಜಾಮೀನು ಪಡೆಯಲು ಕಸರತ್ತು ನಡೆಸಿದ್ದಾನೆ.
ಸೆಪ್ಟೆಂಬರ್ 3ರಂದು ಧಾರವಾಡದ ಹೈಕೋರ್ಟ್‌ನಲ್ಲಿ ಫಯಾಜ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈಗಾಗಲೇ ಹುಬ್ಬಳ್ಳಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತ ಮಾಡಿದೆ. ಪೊಲೀಸರು ಬಂಧನ ಪ್ರಕ್ರಿಯೆ ಸರಿಯಾಗಿ ಮಾಡಿಲ್ಲ, ಪೋಷಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಆಧಾರದಲ್ಲಿ ಫಯಾಜ್‌ಗೆ ಜಾಮೀನು ನೀಡುವಂತೆ ಫಯಾಜ್ ಪರ ವಕೀಲರು ಮನವಿ ಮಾಡಿದ್ದರು. ಆದ್ರೆ ಫಯಾಜ್ ಅರ್ಜಿ ತಿರಸ್ಕರಿಸಿರಿದ್ದ ನ್ಯಾಯಾಧೀಶರು, ಕಳೆದ 1 ವರ್ಷ 5 ತಿಂಗಳಿಂದ ಹಂತಕ ಧಾರವಾಡ ಕಾರಾಗೃಹದಲ್ಲಿದ್ದಾನೆ.
ಇನ್ನೂ ಜಾಮೀನಿನ ಮೇಲೆ ಹೊರಬರುವ ಫಯಾಜ್ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು, ಈಗ ಹೈಕೋರ್ಟ್ ಮೊರೆ ಹೋದ ಫಯಾಜ್ ಪರ ವಕೀಲರು, ಏಪ್ರಿಲ್ 18, 2024ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆಯಲು ಸರ್ಕಸ್ ನಡೆಸಿದ್ದಾರೆ.




