Sandalwood: ಗೌರಿಶಂಕರ ಸಿರಿಯಲ್‌ನಲ್ಲಿ ಹರಿಣಿಯವರಿಗೆ ವಿಲನ್ ಪಾತ್ರ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಹರಿಣಿಯವರು, ವಿಲನ್ ಪಾತ್ರ ಮಾಡಬಾರದು ಅಂತೇನಿಲ್ಲ. ಆದರೆ ಆ ಪಾತ್ರಕ್ಕೆ ಆ ರೀತಿ ವಿಲನ್ ರೀತಿ ನಡೆದುಕ“ಳ್ಳುವ ಅವಶ್ಯಕತೆ ಇದೆಯಾ ಅಂತಾ ನೋಡೋದು ಮುಖ್ಯ. ಆದರೆ ಅದನ್ನು ಈವಾಗ ಯಾರೂ ನೋಡುವುದಿಲ್ಲ. ಬದಲಾಗಿ ನಂಬರ್ಸ್ ಬರ್ತಾ ಇದ್ಯಾ, ಹಾಗಾದ್ರೆ ಇದೇ ಪಾತ್ರ ಮುಂದುವರಿಸೋಣ ಅಂತಲೇ ಯೋಚಿಸುತ್ತಾರೆ ಎಂದು ಹರಿಣಿ ಹೇಳಿದ್ದಾರೆ.
ಈ ಬಗ್ಗೆ ಮಾತು ಮುಂದುವರಿಸಿದ ಹರಿಣಿಯವರು, ನಾನು ಸಮಯ ಹಾಗಾಗಿದೆ ಹೀಗಾಗಿದೆ ಎಂದು ತಿಳಿದಿದ್ದೇವೆ. ಆದರೆ ಸಮಯ ಹಾಗೇ ಇದೆ. ನಾವು ಮಾತ್ರ ಓಡುತ್ತಿದ್ದೇವೆ. ಯಾವುದಕ್ಕಾಗಿ, ಯಾವುದರ ಹಿಂದೆ ಓಡುತ್ತಿದ್ದೇವೆ ಅಂತ ಮಾತ್ರ ತಿಳಿದಿಲ್ಲವೆಂದು ಹರಿಣಿ ಹೇಳಿದ್ದಾರೆ.
ಇನ್ನು ಹರಿಣಿಯವರು ಆಸ್ತಿಕರಾ, ನಾಸ್ತಿಕರಾ ಎಂಬ ಪ್ರಶ್ನೆಗೆ ಉತ್ತರಿಸಿದ ಹರಿಣಿ, ನಾನು ಆಸ್ತಿಕಳೇ. ಶಕ್ತಿ ಇದೆ, ದೇವರು, ಗುರುಗಳನ್ನ ನಾನು ನಂಬುತ್ತೇನೆ. ಆದರೆ ಅತೀಯಾಗಿ ಕುಳಿತು ಪೂಜೆ ಎಲ್ಲ ಮಾಡುವುದಿಲ್ಲ. ನಂಬಿಕೆ ಇದೆ. ಆದರೆ ಅತೀಯಾಗಿ ಅದನ್ನು ನಾವು ತೋರಿಸಿಕ“ಳ್ಳಲು ಇಚ್ಛಿಸುವುದಿಲ್ಲವೆಂದು ಹರಿಣಿ ಹೇಳಿದ್ದಾರೆ.
ಅಲ್ಲದೇ ಹರಿಣಿಯವರು ಅದಾಗ್ತೀನಿ, ಇದಾಗ್ತೀನಿ ಅಂತಾ ಏನೇನೋ ಕನಸು ಕಂಡಿದ್ರಂತೆ. ಆದರೆ ಸದ್ಯ ಕಲಾವಿದರಾಗಿದ್ದಾರೆ. ಆದರೆ ಅವರೆಂದೂ ಕಲಾವಿದೆಯಾಗ್ತೀನಿ ಅಂತಾ ಅಂದುಕ“ಂಡೇ ಇರಲಿಲ್ಲ. ಅವರ ಪೂರ್ತಿ ಸಂದರ್ಶನ ನೋಡಲು ಈ ವೀಡಿಯೋ ನೋಡಿ.