ಇನ್‌ಸ್ಟಾದಲ್ಲಿ ಪರಿಚಯವಾದ ಗೆಳತಿ ಮೇಲೆ ಅ*ತ್ಯಾಚಾರ ಆರೋಪದಡಿ ನಟನ ಬಂಧನ

Bollywood: ಹಿಂದಿ ನಟ ಆಶಿಶ್ ಕಪೂರ್ ವಿರುದ್ಧ ಅತ್ಯಾಚಾರ ಆರೋಪದಡಿ ಕೇಸ್ ದಾಖಲಾಗಿದ್ದು, ಪೋಲೀಸರು ಬಂಧನ ಮಾಡಿದ್ದಾರೆ. ಆಗಸ್ಟ್‌ನಲ್ಲಿ ಆಶಿಶ್ ತನ್ನ ಮೇಲೆ ಶೌಚಾಲಯದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಹೀಗಾಗಿ ಆಶಿಶ್‌ನನ್ನು ದೆಹಲಿ ಪೋಲೀಸರು ಪುಣೆಯಲ್ಲಿ ಬಂಧಿಸಿದ್ದಾರೆ.

ಆಗಸ್ಟ್ ಎರಡನೇಯ ವಾರದಂದು ದೆಹಲಿಯ ಮನೆಯ“ಂದರಲ್ಲಿ ಪಾರ್ಟಿ ನಡೆದಿತ್ತು. ಈ ವೇಳೆ ಆಶಿಶ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಸಂತ್ರಸ್ತೆ ದೂರು ನೀಡಿದ್ದಾಳೆ.  ಇನ್ನು ಈಕೆ ಇನ್‌ಸ್ಟಾಗ್ರಾಮ್‌ ಮೂಲಕ ಆಶಿಶ್‌ಗೆ ಪರಿಚಯವಾಗಿದ್ದಳಂತೆ. ಹೀಗೆ ಪರಿಚಯದಿಂದ ಪಾರ್ಟಿಯಲ್ಲಿ ಇಬ್ಬರೂ ಭೇಟಿಯಾಗಿದ್ದಾರೆ. ಬಳಿಕ ಹೀಗೆ ಅತ್ಯಾಚಾರ ಎಸಗಿದ್ದು, ಅದನ್ನು ತಾನು ರೆಕಾರ್ಡ್ ಮಾಡಿದ್ದೇನೆ ಎಂದಿದ್ದಾಳೆ. ಆದರೆ ಪೋಲೀಸರಿಗೆ ಯಾವುದೇ ವೀಡಿಯೋ ಸಿಕ್ಕಿಲ್ಲ.

ಇನ್ನು ಈ ಬಗ್ಗೆ ಕೇಸ್ ದಾಖಲಿಸಿ ತನಿಖೆ ಆರಂಭಿಸಿರುವ ಪೋಲೀಸರು, ಯಾವ ಮನೆಯಲ್ಲಿ ಪಾರ್ಟಿ ನಡೆದಿದಯೋ ಅಲ್ಲಿ ವಿಚಾರಣೆ ನಡೆಸಿದ್ದಾರೆ. ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ, ಇವರಿಬ್ಬರು ವಾಶ್ ರೂಂಗೆ ಹೋಗಿ ಸುಮಾರು ಸಮಯ ಆಚೆ ಬಾರದೇ ಇದ್ದಾಗ, ಪಾರ್ಟಿಯಲ್ಲಿದ್ದವರು ಹೋಗಿ ಬಾಗಿಲು ಬಡಿದ ಘಟನೆ ನಡೆದಿದೆ ಎಂದು ಪಾರ್ಟಿಗೆ ಬಂದವರು ಹೇಳಿದ್ದಾರೆ. ಇನ್ನು ಸಾತ್ ಫೇರೆ ಮತ್ತು ದೇಖಾ ಏಕ್ ಖ್ವಾಬ್ ಎನ್ನುವ ಸಿರಿಯಲ್‌ನಲ್ಲಿ ಆಶೀಶ್ ನಟಿಸಿದ್ದಾರೆ.

About The Author