Ott Movie Review: ಸುಮತಿ ವಲವು.. ಜಿ 5ನಲ್ಲಿ ಲಭ್ಯವಿರುವ ಸಿನಿಮಾ. ಸುಮತಿ ಅನ್ನೋ ಪ್ರೇತದ ಕಥೆ ಹೇಳುವ, ಸುಮತಿ ಸರ್ಕಲ್ ಅನ್ನೋ ಜಾಗದಲ್ಲಿ ನಡೆಯುವ ಘಟನೆಯನ್ನ“ಳಗ“ಂಡ ಸಿನಿಮಾ ಇದು. ಗ್ರಾಮವನ್ನು ಕಾಯುವ ದೈವಗಳಿಗೆ ಪೂಜೆ ಮಾಡುವ ಸನ್ನಿವೇಶದಿಂದ ಕಥೆ ಶುರುವಾಗುತ್ತದೆ.
ಯಾವುದೋ ಮುಖ್ಯವಾದ ಕೆಲಸಕ್ಕೆ ಹೋಗಲು ದೈವದ ಬಳಿ ಅನುಮತಿ ಕೇಳಿದಾಗ, ದೈವ ಅನುಮತಿ ನಿರಾಕರಿಸುತ್ತದೆ. ಆದರೆ ಅಲ್ಲೇ ಇದ್ದ ಓರ್ವ ದೈವದ ಅನುಮತಿಗೆ ವಿರುದ್ಧವಾಗಿ, ಆ ಕೆಲಸಕ್ಕೆ ಹೋಗೇ ಹೋಗುತ್ತೇನೆ ಎಂದು ಹೋಗೇ ಬಿಡುತ್ತಾನೆ. ಅವನ ಪತ್ನಿ ಅವನನ್ನು ತಡೆಯಲು ಯತ್ನಿಸಿದರೂ ಅವನು ಭಂಡ ಧೈರ್ಯದಿಂದ ಆಕೆಯನ್ನು ಕರೆದುಕ“ಂಡೇ ಹೋಗುತ್ತಾನೆ. ಆ ಸ್ಥಳದಲ್ಲಿ ಪ್ರೇತವಾಗಿ ಓಡಾಡುತ್ತಿರುವವಳೇ ಸುಮತಿ. ಅದಾದ ಬಳಿಕ ಶುರುವಾಗುವುದೇ ಸುಮತಿಯಿಂದ ಶಾಪಗ್ರಸ್ತವಾದ ಊರಿನ ಕಥೆ.
ರಾತ್ರಿ 8 ಗಂಟೆಯ“ಳಗೆ ಎಲ್ಲೇ ಇದ್ದರೂ ಮನೆ ಸೇರಬೇಕು. ಇಲ್ಲವಾದ್ರೆ ಸುಮತಿ ಅವರನ್ನ ಸಾಯಿಸಿಬಿಡುತ್ತಾಳೆ ಅನ್ನೋ ನಂಬಿಕೆ ಆ ಗ್ರಾಮದವರಿಗೆ. ಅದರಲ್ಲೂ ಸುಮತಿ ಸರ್ಕಲ್ ಹತ್ರ ಹೋಗಲು ಆ ಊರಿನ ಗಂಡಸ್ರು ಕೂಡ ಹೆದರುತ್ತಿದ್ರು. ಯಾಕಂದ್ರೆ ದೆವ್ವಾ ಗಿವ್ವಾ ಏನೂ ಇಲ್ಲಾ ಎಲ್ಲಾ ಸುಳ್ಳು ಅಂತಾ ಅಲ್ಲಿಗೆ ಹೋಗಿರುವವರೆಲ್ಲರಿಗೂ ಅಲ್ಲಿ ಸುಮತಿಯ ಆತ್ಮ ಇರುವ ಅನುಭವವಾಗಿತ್ತು.
ಹೀಗಿರುವಾಗ ಸಿನಿಮಾ ಹೀರೋಗೂ ಆ ಕಾಡಿಗೆ ಹೋಗುವ Time ಬರತ್ತೆ. ಹೀರೋ ಕಾಡಿಗೆ ಹೋದ ಬಳಿಕ ಏನಾಗತ್ತೆ. ಕಥೆ ಮುಂದೆ ಹೇಗೆ ಸಾಗತ್ತೆ ಅನ್ನೋದನ್ನ ನೀವು ಸಿನಿಮಾ ನೋಡಿಯೇ ತಿಳೀಬೇಕು.
ಸುಮತಿ ಅಂದ್ರೆ ಯಾರು..? ಆಕೆ ಹೇಗೆ ಸತ್ತಳು..? ಆಕೆ ದೆವ್ವ ಆಗಿದ್ದಾದ್ರೂ ಹೇಗೆ ಅಂತಾ ಸಿನಿಮಾ ನೋಡಿದಾಗ ನಿಮಗೆ ತಿಳಿಯತ್ತೆ. ಸುಮತಿಯಿಂದ ಶಾಪಗ್ರಸ್ತವಾಗಿರುವ ಗ್ರಾಮ ಎಂಬ ಭ್ರಮೆಯಲ್ಲಿದ್ದ ಜನರಿಗೆ ಸಿಗುವ ಟ್ವಿಸ್ಟ್ ಕ್ಲೈಮ್ಯಾಕ್ಸ್‌ನಲ್ಲಿ ನಿಮಗೆ ಶಾಕ್ ನೀಡೋದಂತೂ ನಿಜ.
ಈ ಸಿನಿಮಾದಲ್ಲಿ ಅರ್ಜುನ್ ಅಶೋಕನ್ ಅಪ್ಪು ಆಗಿ ಪ್ರಮುಖ ನಟನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಅಭಿಷೇಕ್ ಪಿಳ್ಳೈ,ಮಾಳ್ವಿಕಾ ಮನೋಜ್, ಜೂಹಿ ಜೈಕುಮಾರ್ ಸೇರಿ ಹಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಷ್ಣು ಶಶಿ ಶಂಕರ್ ಸಿನಿಮಾ ನಿರ್ದೇಶಿಸಿದ್ದು, ಅಭಿಷೇಕ್ ಪಿಳ್ಳೈ ಕಥೆ ಬರೆದಿದ್ದಾರೆ. ಮಲಯಾಳಂ ಹಾರರ್ ಸಿನಿಮಾ ಇದಾಗಿದ್ದು, ಕನ್ನಡದಲ್ಲಿ ಜೀ ಫೈವ್‌ನಲ್ಲಿ ಲಭ್ಯವಿದೆ.




