ಜೈಲಲ್ಲಿ ದರ್ಶನ್‌ಗೆ ಫಂಗಸ್ – ಈ ಸೋಂಕು ಹೇಗೆ ಬಂತು?

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ 2ನೇ ಬಾರಿ ಲಾಕ್ ಆಗಿದ್ದಾರೆ. ಜೈಲಲ್ಲಿ ನರಕಯಾತನೆ ಅನುಭವಿಸುತ್ತಿದ್ದೇನೆ ಎಂದಿರುವ ಅವರು, ತಾವು ಈಗಿರುವ ಸ್ಥಿತಿಯ ಬಗ್ಗೆ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್‌ ಅವರು ಇತ್ತೀಚೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ರು. ನಾನು ಜೈಲಿನಲ್ಲಿ ಬೆಳಕು ನೋಡಿಲ್ಲ. ಕೈಗಳು ಸಂಪೂರ್ಣವಾಗಿ ಫಂಗಸ್ ಸೋಂಕಿಗೆ ಒಳಗಾಗಿವೆ. ತಿಂಗಳಿನಿಂದ ಬಿಸಿಲು ಕಾಣಿಲ್ಲ. ದಯಮಾಡಿ ವಿಷ ಕೊಟ್ಟು ಬಿಡಿ ಎಂದು ಕಣ್ಣೀರಿನೊಂದಿಗೆ ಅವರು ನ್ಯಾಯಾಧೀಶರ ಮುಂದೆ ಬೇಡಿಕೆ ಇಟ್ಟಿದ್ದಾರೆ.

ನಟ ದರ್ಶನ್‌ ಅವರು ಉಲ್ಲೇಖಿಸಿದ ಕೈಗೆ ಫಂಗಸ್ ಸೋಂಕು ಎಂಬ ಅಂಶವು ಕೇವಲ ದರ್ಶನ್ ಅವ್ರು ಮಾತ್ರವಲ್ಲ. ಹಲವಾರು ಕೈದಿಗಳು ಮತ್ತು ನಾವು ನೀವೆಲ್ಲಾ ಎದುರಿಸುತ್ತಿರುವ ತೊಂದರೆಯಾಗಿದೆ. ಹಾಗಾದ್ರೆ ಈ ಫಂಗಸ್ ಅಂದ್ರೆ ಏನು? ಯಾಕೆ ಬರುತ್ತೆ? ಇದರಿಂದ ಏನಾಗುತ್ತೆ? ಎಲ್ಲವನ್ನು ಈ ವಿಡಿಯೋದಲ್ಲಿ ನೋಡೋದಾದ್ರೆ..

ಫಂಗಸ್ ಅಥವಾ ಶಿಲೀಂಧ್ರ ಸೋಂಕು ಎಂದರೆ ಸೂಕ್ಷ್ಮಾಣುಜೀವಿಗಳಿಂದ ಉಂಟಾಗುವ ಚರ್ಮ ಸಂಬಂಧಿತ ಸಮಸ್ಯೆ. ಹೆಚ್ಚಿನ ತೇವಾಂಶವಿರುವ ಜಾಗಗಳಲ್ಲಿ ಈ ಸೋಂಕು ಬೆಳೆಯುತ್ತೆ. ಅನ್ನನಾಳ, ಮೆದುಳಿನ ಮೇಲ್ಕವಚ ಸೇರಿದಂತೆ ವಿವಿಧ ಅಂಗಗಳಿಗೆ ಶಿಲೀಂಧ್ರಗಳ ಸೋಂಕು ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಬಿಸಿಲಿನಲ್ಲಿ ಹೆಚ್ಚು ಆಕ್ಟಿವ್ ಆಗಿರಲಿಲ್ಲ ಅಂದ್ರು ಫಂಗಸ್ ಹೆಚ್ಚಾಗಿ ಕಾಣಿಸುತ್ತೆ.

ಫಂಗಸ್ ಇನ್ಫೆಕ್ಷನ್ ಇದರ ಸಾಮಾನ್ಯ ಲಕ್ಷಣಗಳನ್ನ ನೋಡೋದಾದ್ರೆ, ತೊಡೆ, ಸೊಂಟ, ಕೈಕಾಲು ಬೆರಳು ನಡುವೆ ಉರಿ ಮತ್ತು ತುರಿಕೆಯಾಗತ್ತೆ. ಬಿಳಿ ಅಥವಾ ಕೆಂಪು ಕಲೆಗಳಾಗತ್ತೆ. ಚರ್ಮ ಬಣ್ಣ ಬದಲಾವಣೆಯಾಗತ್ತೆ. ಕಾಲುಗಳು, ಕೈಗಳಲ್ಲಿ ತುರಿಕೆ ಉಂಟಾಗತ್ತೆ.

ಇನ್ನು ಇದಕ್ಕೆ ನೀವು ಮನೆಯಲ್ಲೇ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಬೇಕು. ದೇಹದ ಯಾವುದೇ ಭಾಗ ತೇವಾಂಶದಿಂದ ಕೂಡಿರದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಸ್ನಾನ ಮಾಡಿದ ನಂತರ ದೇಹವನ್ನು ಟವೆಲ್‍ನಿಂದ ಸರಿಯಾಗಿ ಒರೆಸಿಕೊಳ್ಳಬೇಕು. ಸ್ವಚ್ಛ ಟವೆಲ್, ಬಟ್ಟೆಗಳನ್ನು ಪ್ರತಿನಿತ್ಯ ಬಳಸಬೇಕು.

ತೇವಾಂಶರಹಿತ ಒಳಉಡುಪುಗಳನ್ನು ಬಳಸಬೇಕು. ಸಾಬೂನು ಮತ್ತು ಬಾಚಣಿಗೆಗಳು ಎಲ್ಲರಿಗೂ ಪ್ರತ್ಯೇಕವಾಗಿ ಇರಬೇಕು. ವಾರದಲ್ಲಿ ಕನಿಷ್ಠ ಒಂದು ಸಲವಾದರೂ ತಲೆಗೆ ಸ್ನಾನ ಮಾಡಬೇಕು. ಬೆಳಗಿನ ಜಾವದ ಬಿಸಿಲಿನಲ್ಲಿ ಹೆಚ್ಚಾಗಿ ಮೈಯೊಡ್ಡಬೇಕು. ಇನ್ನು ಈಗಾಗಲೇ ನಿಮಗೆ ಫಂಗಸ್ ಸಮಸ್ಯೆ ಏನಾದ್ರು ಇದ್ರೆ ನಿಮ್ಮ ಹತ್ತಿರದ ಆಸ್ಪತ್ರೆಗೆ ಹೋಗಿ ಡಾಕ್ಟರ್ ಸಲಹೆಯಂತೆ ಔಷಧಿ ಬಳಸುವುದು ಉತ್ತಮ.

ವರದಿ : ಲಾವಣ್ಯ ಅನಿಗೋಳ

About The Author