Sandalwood: ಸೊಸೆ ಮಾಡಿದ ಆರೋಪದ ಬಗ್ಗೆ ನಿರ್ದೇಶಕ ಎಸ್.ನಾರಾಯಣ್ ಪ್ರತಿಕ್ರಿಯೆ

Sandalwood News: ಸ್ಯಾಂಡಲ್‌ವುಡ್ ನಿರ್ದೇಶಕ ಎಸ್.ನಾರಾಯಣ್ ಅವರ ಸೊಸೆ ಪವಿತ್ರಾ, ನಾರಾಯಣ್ ಫ್ಯಾಮಿಲಿ ವಿರುದ್ಧ ಡೌರಿ ಕೇಸ್ ಹಾಕಿದ್ದಾರೆ.

ಪವಿತ್ರಾ ಅವರ ಪತಿ, ನಾರಾಯಣ್ ಅವರ ಮಗ ಪವನ್ ಅವರು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಕಳೆದ 1ವರೆ ವರ್ಷದ ಹಿಂದೆ ಪತಿಯನ್ನು ಬಿಟ್ಟು ಪವಿತ್ರಾ ತವರು ಸೇರಿದ್ದಾರೆ. ಇವರಿಗೆ ಓರ್ವ ಮಗನಿದ್ದಾನೆ. ಪವನ್‌ಗೆ ಕೆಲಸವಿಲ್ಲದ ಕಾರಣ, ಪವಿತ್ರಾಳೇ ದುಡಿಯುತ್ತಿದ್ದಳು. ಆದರೆ ಪವನ್ ಕಲಾಸಾಮ್ರಾಟ್ ಅಕಾಡೆಮಿ ಓಪನ್ ಮಾಡಿದ್ದು, ಅದಕ್ಕಾಗಿಯೂ ಪವಿತ್ರ ಬಳಿಯೇ ಹಣ ಕೇಳಿದ್ದ.

ಅಲ್ಲದೇ ಆ ಅಕಾಡೆಮಿಯೂ ಲಾಸ್ ಆಯಿತು. ಬಳಿಕ ನಾರಾಯಣ್ ಫ್ಯಾಮಿಲಿ ತನಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲು ಆರಂಭಿಸಿತು ಎಂದು ಆರೋಪಿಸಿದ್ದಾರೆ. ಅಲ್ಲದೇ ನನಗೂ ನನ್ನ ಮಗನಿಗೂ ಏನಾದರೂ ಸಮಸ್ಯೆ ಆದರೆ ಅದಕ್ಕೆ ಇವರೇ ಕಾರಣ ಎಂದು ಪವಿತ್ರಾ ಆರೋಪಿಸಿ, ಜ್ಞಾನಭಾರತಿ ಪೋಲೀಸ್ ಸ್ಟೇಶನ್‌ನಲ್ಲಿ ಎಫ್‌ಐಆರ್ ಹಾಕಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಾರಾಯಣ್, ನಾನು ಸೊಸೆ ತಂದ ಸೌಭಾಗ್ಯ ಎನ್ನುವ ಸಿನಿಮಾ ಮಾಡಿದ್ದೆ. ಇದೀಗ ಈ ಸೌಭಾಗ್ಯ ನನ್ನ ಸೊಸೆ ತಂದಿದ್ದಾಳೆ. ಇದೆಲ್ಲ ನನ್ನ ಹೆಸರಿಗೆ ಮಸಿ ಬಳಿಯುವ ಹುನ್ನಾರ. ನನ್ನ ಮುಖಕ್ಕೆ ಮಸಿ ಬಳಿಯಲು ಬಂದವರ ಕೈಗೂ ಮಸಿ ತಾಕಿರುತ್ತದೆ. ನಾನು ವರದಕ್ಷಿಣೆ ವಿರುದ್ಧ ಹೋರಾಡುತ್ತ ಬಂದವನು. ನಾನು ಏನು ಅನ್ನೋದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಯಾರು ಏನೇ ಆರೋಪಿಸಿದರೂ ನಾನೇನು ಉತ್ತರಿಸುವುದಿಲ್ಲ. ಅವರ ಖುಷಿಗಾಗಿ ಅವರು 1ವರೆ ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದರು. ಇಂದಿನ ಸೊಸೆಯಂದಿರಿಗೆ ಅತ್ತೆ ಮಾವನ ಮೇಲೆ ಆರೋಪ ಮಾಡುವುದು ಮಾತ್ರ ಕೆಲಸವಾಗಿದೆ. ಈ ದೇಶದಲ್ಲಿ ಎಲ್ಲಾ ಅತ್ತೆ ಮಾವಂದಿರಿಗೂ ಇದು ಫಿಕ್ಸ್ ಎಂದು ನಾರಾಯಣ್ ಹೇಳಿದ್ದಾರೆ.

About The Author