ಕೆಲವು ಮಕ್ಕಳು ಚುರುಕಾಗಿರ್ತಾರೆ. ಆದ್ರೆ ಓದಿದ್ದೇನು ನೆನಪಿನಲ್ಲಿರುವುದಿಲ್ಲ. ಬರೀ ಮಕ್ಕಳಷ್ಟೇ ಅಲ್ಲ, ದೊಡ್ಡವರಿಗೂ ಕೂಡ ಮರೆಗುಳಿ ಸ್ವಭಾವವಿರುತ್ತದೆ. ಅಂಥವರು ಒಂದು ಎಲೆಯನ್ನು ಸೇವಿಸಬೇಕು. ಯಾವುದು ಆ ಎಲೆ..? ಅದನ್ನ ಸೇವಿಸುವುದರಿಂದ ಏನು ಲಾಭ ಅನ್ನೋದರ ಬಗ್ಗೆ ನಾವಿಂದು ತಿಳಿಯೋಣ.
ಬ್ರಾಹ್ಮಿ ಎಲೆ. ಇದನ್ನು ಒಂದೆಲಗ, ಸರಸ್ವತಿ ಎಲೆ ಅಂತ ಕೂಡ ಕರೆಯಲಾಗುತ್ತೆ. ಇನ್ನು ಭಾರತದಲ್ಲಷ್ಟೇ ಅಲ್ಲದೇ ಚೀನಾ ಮತ್ತು ಆಫ್ರಿಕಾದಲ್ಲಿ ಈ ಎಲೆಯನ್ನ ಔಷಧಿ ರೂಪದಲ್ಲಿ ಬಳಸಲಾಗುತ್ತದೆ. ದೇಹಕ್ಕೆ ತಂಪಾದ ಈ ಎಲೆ, ಸ್ಮರಣ ಶಕ್ತಿ ವೃದ್ಧಿಸುವಲ್ಲಿಯೂ ಸಹಕಾರಿ.
ಈ ಎಲೆಯನ್ನ ಚೆನ್ನಾಗಿ ತೊಳೆದು ದಿನಕ್ಕೆ ಎರಡರಿಂದ ಮೂರು ಎಲೆ ತಿಂದರೂ ಸಾಕು. ನೆನಪಿನ ಶಕ್ತಿ ಹೆಚ್ಚುತ್ತದೆ. ಅಥವಾ ಇದರ ಜ್ಯೂಸ್, ತಂಬುಳಿ ಮಾಡಿ ಸೇವಿಸಿದರೂ ಉತ್ತಮ ಲಾಭ ಪಡಿಯಬಹುದು. ಇದು ದೇಹಕ್ಕೂ ಕೂಡಾ ತಂಪಾಗಿರುತ್ತದೆ.
ಇನ್ನು ಮಕ್ಕಳು ಮಾತನಾಡುವಲ್ಲಿ ಪದೇ ಪದೇ ತಡವರಿಸುತ್ತಿದ್ದರೆ, ಅಂಥವರಿಗೆ ಪ್ರತಿದಿನ ಬೆಳಿಗ್ಗೆ ಎರಡೆರಡು ಬ್ರಾಹ್ಮಿ ಎಲೆ ತಿನ್ನಿಸಿ. ಇದರಿಂದ ಸ್ಪಷ್ಟ ಉಚ್ಛಾರಣೆ ಕೂಡ ಸಾಧ್ಯವಾಗುತ್ತದೆ.

ಮಲಬದ್ಧತೆಯಿಂದ ಬಳಲುವವರು ಬ್ರಾಹ್ಮಿ ಎಲೆಯ ಚಟ್ನಿ, ಅಥವಾ ಪಲ್ಯದ ಸೇವನೆ ಮಾಡಬೇಕು. ಇನ್ನು ಈ ಎಲೆಯ ಉಪಯೋಗದಿಂದ ನರ ರೋಗಗಳನ್ನ ಕೂಡ ತಡೆಗಟ್ಟಬಹುದಾಗಿದೆ. ನಿದ್ರಾಹೀನತೆ ಸಮಸ್ಯೆ ನಿವಾರಿಸುವಲ್ಲಿಯೂ ಒಂದೆಲಗ ಪ್ರಮುಖ ಕಾರ್ಯ ನಿರ್ವಹಿಸುತ್ತದೆ.
Shravani Somayaji, Karnataka TV

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

