ಅತಿಯಾದ JUNK: PLAN A ಮಾತ್ರ B ಇಲ್ಲ: Anjaan Gym Trainer

Health Tips: ಇಂದಿನ ದಿನಗಳಲ್ಲಿ ಜಂಕ್ ಫುಡ್‌ಗಳ ಹಾವಳಿ ಜೋರಾಗಿದೆ. ಅದರ ಮಧ್ಯೆ ಫುಡ್ ವ್ಲಾಗರ್ಸ್ ಹಾವಳಿ. ವೀಡಿಯೋ ನೋಡಿ, ಆ ಫುಡ್ ಪ್ಲೇಸ್‌ಗೆ 1 ಸಲಾ ಹೋಗಲೇಬೇಕು ಅನ್ನೋ ಆಸೆ. ಇದೇ ಆಸೆಗಳು ಹಲವು ರೋಗಗಳಿಗೆ ದಾರಿ ಮಾಡಿಕ“ಡುತ್ತಿದೆ. ಈ ಬಗ್ಗೆ ಜಿಮ್ ಟ್ರೇನರ್ ಮಾತನಾಡಿದ್ದಾರೆ.

ನಾವು ಯಂಗ್ ಆಗಿ, ಶಕ್ತಿವಂತರಾಗಿ ಇರಬೇಕು ಅಂದ್ರೆ ನಾವು ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಖುಷಿ ಮುಖ್ಯ. ನಮಗೆ ಕೆಟ್ಟಭ್ಯಾಸಗಳು ಇರಬಾರದು. ಇದೇ ರೀತಿ ಜಂಕ್‌ ಫುಡ್‌ ಕೂಡ ಲಿಮಿಟ್‌ನಲ್ಲಿರಬೇಕು. ಹಾಗಿದ್ದಾಗ ಮಾತ್ರ ನಮಗೆ ವಯಸ್ಸಾದರೂ ನಾವು ಯಂಗ್ ಆಗಿ ಕಾಣಬಹುದು ಅಂತಾರೆ ಅಂಜನ್.

ಇನ್ನು ಖಾರಾ ತಿಂಡಿ ಸೇವನೆ ಬಗ್ಗೆ ಮಾತನಾಡಿರುವ ಅಂಜನ್, ನಾವು ಯಾವಾಗ ಖಾರಾ ತಿಂಡಿ ಸೇವನೆ ಮಾಡುತ್ತೇವೋ, ಆಗ ನಮಗೆ ಎದೆ ಉರಿ ಬರುತ್ತದೆ. ಹಾಗಾಗಿ ನಾನು ಖಾರಾ ತಿನ್ನುವುದನ್ನು ಬಿಟ್ಟು 20 ವರ್ಷ ಆಯಿತು ಅಂತಾರೆ ಅಂಜನ್.

ಅಲ್ಲದೇ ಇತ್ತೀಚೆಗೆ ವ್ಲಾಗರ್ಗಳು ನೀಡುವ ಬಿಲ್ಡಪ್‌ ಎಂಥೆಂಥ ಸಮಸ್ಯೆ ಹುಟ್ಟುಹಾಕುತ್ತಿದೆ ಅನ್ನೋ ಬಗ್ಗೆಯೂ ಅಂಜನ್ ಮಾತನಾಡಿದ್ದಾರೆ. ಅವರ ಪೂರ್ತಿ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author