Beauty Tips: ಶುದ್ಧ ತುಪ್ಪವನ್ನು ಈ ರೀತಿ ಬಳಸಿ, ನಿಮ್ಮ ಮುಖದ ಕಾಂತಿ ಹೆಚ್ಚಿಸಿ..

Beauty Tips: ತುಪ್ಪದ ಸೇವನೆಯಿಂದ ಆರೋಗ್ಯ ಎಷ್ಟು ಉತ್ತಮವಾಗಿರುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಮೂಳೆ ಬಲವಾಗಿರಲು, ಜೀರ್ಣಕ್ರಿಯೆ ಉತ್ತಮವಾಗಿರಲು, ಸ್ಕಿನ್ ಚೆನ್ನಾಗಿರಲು ತುಪ್ಪ ಸೇವಿಸಲಾಗುತ್ತದೆ. ಇದರ ಜತೆಗೆ ತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದಲೂ ನಮ್ಮ ಸ್ಕಿನ್ ಉತ್ತಮವಾಗುತ್ತದೆ. ಹಾಗಾದ್ರೆ ಇದನ್ನು ಅಪ್ಲೈ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಪ್ರತಿದಿನ ರಾತ್ರಿ ಮುಖಕ್ಕೆ ಸಣ್ಣ ಪ್ರಮಾಣದಲ್ಲಿ ತುಪ್ಪ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ನಿಮ್ಮದು ಎಣ್ಣೆ ಮುಖವಾಗಿದ್ದಲ್ಲಿ ನೀವು ಎಣ್ಣೆ, ಕೆನೆ, ತುಪ್ಪ ಬಳಸದಿರುವುದೇ ಉತ್ತಮ. ಆದರೆ ನಿಮ್ಮದು ಡ್ರೈ ಸ್ಕಿನ್ ಆಗಿದ್ದಲ್ಲಿ ನೀವು ಈ ರೀತಿ ರಾತ್ರಿ ವೇಳೆಯೇ ತುಪ್ಪದ ಮಸಾಜ್ ಮಾಡಬಹುದು. ನೀವು ಹೀಗೆ ಮಾಡುವುದರಿಂದ ನೀವು ಬೇರೆ ಕ್ರೀಮ್‌ ಬಳಸದಿದ್ದರೂ ನಿಮ್ಮ ಸ್ಕಿನ್ ಸಾಫ್ಟ್ ಆಗಿ, ಕ್ಲೀನ್ ಆಗಿರುತ್ತದೆ.

ನೀವು ಮುಖಕ್ಕೆ ಹಚ್ಚಲು ಶುದ್ಧ ತುಪ್ಪವನ್ನೇ ಬಳಸಬೇಕು. ಪೇಟೆಯಲ್ಲಿ ಸಿಗುವ ತುಪ್ಪ ಆರೋಗ್ಯಕರವಾಗಿದ್ದು, ಶುದ್ಧವಾಗಿದ್ದು ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ನೀವು ಬಳಸುವ ತುಪ್ಪ ಶುದ್ಧವಾಗಿದ್ದರೆ ಮಾತ್ರ ಇದರ ಪರಿಣಾಮ ಕಾಣಬಹುದು. ಅಲ್ಲದೇ ನಿಮಗೆ ತುಪ್ಪದಿಂದ ಅಲರ್ಜಿ ಎಂದಾದಲ್ಲಿ ನೀವು ತುಪ್ಪವನ್ನು ಬಳಸದಿರುವುದು ಉತ್ತಮ.

About The Author