ಆಗಸ್ಟ್ 14 2020 ರಾಶಿ ಭವಿಷ್ಯ

ಮೇಷ : ಬಂಧು ಮಿತ್ರರು ನಿಮಗೆ ಎಲ್ಲ ವಿಧದಲ್ಲೂ ಸಹಕಾರ ನೀಡಿಯಾರು. ಕೋರ್ಟು ಕಚೇರಿಗಳ ಕೆಲಸ ದಾವೆ ಪುರಾವೆ ತೀರ್ಮಾನವು ನಿಮಗೆ ಅನುಕೂಲವಾಗಲಿದೆ. ಕೃಷಿಕರಿಗೆ ಉತ್ಸಾಹ ವಾತಾವರಣ.

ವೃಷಭ : ಚಾಲಕರಿಗೆ ವಾಹನ ಚಾಲನೆಯಲ್ಲಿ ಹೆಚ್ಚಿನ ಗಮನ ಹರಿಸಬೇಕಾದೀತು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸಲಿದ್ದಾರೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನಸಂಗ್ರಹವಾದೀತು.

ಮಿಥುನ : ವೃತ್ತಿರಂಗದಲ್ಲಿ ತನ್ನ ಕೈ ಕೆಳಗಿನ ನೌಕರ ವರ್ಗದವರ ಅಸಹಕಾರದಿಂದ ಆತಂಕ ಹೆಚ್ಚಾದೀತು. ಆರ್ಥಿಕವಾಗಿ ಋಣಬಾಧೆ ಕೂಡಾ ಬಾಧಿಸಲಿದೆ. ನ್ಯಾಯಾಲಯದಲ್ಲಿ ಯಶಸ್ಸು ಕೂಡಾ ದೊರಕಲಿದೆ.

ಕರ್ಕ : ವಾಹನದಿಂದ ನಷ್ಟ ಉಂಟಾದೀತು. ಅನೇಕ ವಿಧದ ಖರ್ಚು ವೆಚ್ಚಗಳು ಆತಂಕಕ್ಕೆ ಕಾರಣವಾದೀತು. ಪ್ರಯಾಣದಲ್ಲಿ ಕಾರ್ಯಹಾನಿ. ನೆಮ್ಮದಿ ಇರಲಾರದು. ಹೊಸ ಮಿತ್ರರ ಭೇಟಿಯಿಂದ ಸಂತಸ.

ಸಿಂಹ : ಅಂತಃ ಶತ್ರುಗಳ ಕಾಟದಿಂದ ಬರಬೇಕಾದ ಸಹಕಾರ ಸಿಗಲಾರದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಂಡುಬರಲಿದೆ. ರಾಜಕೀಯ ನಿಲುವಿನಲ್ಲಿ ಪರಿವರ್ತನೆ ಕಂಡುಬರುವುದು.

ಕನ್ಯಾ : ಖರ್ಚು ವೆಚ್ಚಗಳಲ್ಲಿ ಇಮ್ಮಡಿ ವಿತರಣೆ ಕಂಡುಬರುವುದು. ನೆರೆಹೊರೆಯವರೊಡನೆ ಪದೇ ಪದೇ ಕಲಹ ತಂದೀತು. ಬಂಧುಗಳು ನಮ್ಮ ವಿರುದ್ಧ ನಿಂತಾರು. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿದೆ.

ತುಲಾ : ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ಮುನ್ನಡೆ ಇದೆ. ಹಿರಿಯರಿಗೆ ತೀರ್ಥ ಯಾತ್ರೆ ಪ್ರವಾಸಾದಿಗಳು ನಡೆದಾವು. ಆಸ್ತಿಯ ವಿಚಾರದಲ್ಲಿ ಮಹತ್ವದ ನಿರ್ಧಾರ ಬಂದು ಪ್ರಕಟವಾಗಲಿದೆ. ಶುಭವಿದೆ.

ವೃಶ್ಚಿಕ : ಆಗಾಗ ಧನವಿನಿಯೋಗವಾದರೂ ಸಂತಸ ತರಲಿದೆ. ಶತ್ರುಗಳ ವಕ್ರದೃಷ್ಟಿಯಿಂದ ಧರ್ಮಕಾರ್ಯದಲ್ಲಿ ಸಮಸ್ಯೆ ತಂದೀತು. ಹಳೆ ಚರ್ಮದ ಖಾಯಿಲೆ ಪುನಃ ಮರುಕಳಿಸಲಿದೆ.

ಧನು : ಹೊಸ ಕಾರ್ಯ ಆರಂಭಕ್ಕೆ ಇದು ಸಕಾಲ. ಆದಾಯ ದುಡುಕು ನಿರ್ಧಾರಗಳಿಂದ ಕುಂಠಿತಗೊಳ್ಳಲಿದೆ. ಮಾತೃ ಸೇವೆಗೆ ಧನವಿನಿಯೋಗವಾದೀತು. ಆಕಸ್ಮಿಕ ಆದಾಯಕ್ಕಾಗಿ ಆಸೆ ಪಡಬೇಡಿ.

ಮಕರ : ಅಧಿಕಾರಿ ವರ್ಗದವರ ಸಹಕಾರದಿಂದ ಕಾರ್ಯಸಾಧನೆಯಾಗಿ ಸಮಾಧಾನ ತರುವುದು. ಉದ್ಯೋಗಿಗಳಿಗೆ ಅನಿರೀಕ್ಷಿತ ಬದಲಾವಣೆಯ ಸಂಭವವಿದೆ. ಮನೆಯಲ್ಲಿ ಮನದನ್ನೆಯ ಸಹಕಾರದಿಂದ ಸಂತಸ.

ಕುಂಭ : ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅಡಚಣೆಗಳು ಕಂಡುಬಂದಾವು. ಯೋಗ್ಯ ವಯಸ್ಕರಿಗೆ ಉತ್ಮ ಸಂಬಂಧ ತೋರಿಬಂದು ಸಂತಸ ತರಲಿದೆ. ಸ್ಥಿರಾಸ್ಥಿ ವಿಚಾರದಲ್ಲಿ ತೊಡಕು ಇದ್ದಾವು.

ಮೀನ : ನೂತನ ದಂಪತಿಗಳಿಗೆ ಸಂತತಿಯ ಚಿಂತೆ ತೋರಿಬರಲಿದೆ. ವ್ಯಾಪಾರಿ ವರ್ಗದವರಿಗೆ ಉತ್ತಮ ಧನ ಆಗಮನವಿದೆ. ಯಾರಿಗೋ ಸಹಾಯ ಮಾಡವು ಹೋಗಿ ಕೈಸುಟ್ಟುಕೊಳ್ಳುವುದು ಬೇಡ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

About The Author