ಅಂತೂ ಇಂತೂ ವಿಲನ್ ಸರ್ಪ್ರೈಸ್ ರಿವೀಲ್ ಮಾಡಿದ ರಾಕಿಂಗ್ ಸ್ಟಾರ್..!

ಕೊರೊನಾ ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ, ಕೆಲ ದಿನಗಳ ಹಿಂದೆ ತೀವ್ರ ಅಸ್ವಸ್ಥರಾಗಿದ್ದರು. ಆದ್ರೆ ಎಸ್‌ಪಿಬಿಗಾಗಿ ಇಡೀ ದೇಶವೇ ಪ್ರಾರ್ಥಿಸಿದ್ದು, ಸದ್ಯ ಎಸ್‌ಪಿಬಿ ಆರೋಗ್ಯವಾಗಿದ್ದಾರೆ. ಈ ಬಗ್ಗೆ ಟ್ವೀಟರ್‌ನಲ್ಲಿ ವೀಡಿಯೋ ಅಪ್ಲೋಡ್ ಮಾಡಿರುವ ಸೂಪರ್‌ಸ್ಟಾರ್ ರಜನಿಕಾಂತ್, ಎಸ್‌ಪಿಬಿ ಡೇಂಜರ್ ಝೋನ್‌ನಿಂದ ಪಾರಾಗಿದ್ದು ಖುಷಿ ತಂದಿದೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಆಗಸ್ಟ್ 17ಕ್ಕೆ ಏನೋ ಸರ್ಪೈಸ್ ಇದೆ ಎಂದು ಹೇಳಿದ್ದ ಯಶ್, ಕೊನೆಗೂ ಆ ಸರ್ಪ್ರೈಸನ್ನಾ ರಿವೀಲ್ ಮಾಡಿದ್ದಾರೆ. ಮೊನ್ನೆ ತಾನೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೀರೋ ನಹಿ ಈಸ್‌ ಬಾರ್ ವಿಲನ್ ಆ ರಹಾ ಹೈ ಎಂದು ವೀಡಿಯೋವೊಂದನ್ನ ಹಾಕಿದ್ದ ಯಶ್, ಎಲ್ಲರ ತಲೆಗೂ ಹುಳ ಬಿಟ್ಟಿದ್ದರು. ಅವರ ಫ್ಯಾನ್ಸ್ ಎಲ್ಲ ಕೆಜಿಎಫ್ ಮೂವಿ ಬಗ್ಗೆ ಏನೋ ಇರಬಹುದೆಂದು ಅಂದಾಜಿಸಿದ್ದರು. ಆದ್ರೆ ಇವತ್ತು ಯಶ್ ತಮ್ಮ ಇನ್‌ಸ್ಚಾಗ್ರಾಮ್‌ನಲ್ಲಿ ಫೋಟೋವೊಂದನ್ನ ಅಪ್ಲೋಡ್ ಮಾಡಿದ್ದು, ಕೆಲವರ ಕಥೆಯಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿ ವಿಲನ್ ಆಗಿರ್ತಾರೆ ಎಂದು ಬರೆದುಕೊಂಡಿದ್ದು, ವಿಲನ್ ಹೆಸರಿನ ಪರ್ಫ್ಯೂಮ್ ಫೋಟೋ ರಿವೀಲ್ ಮಾಡಿದ್ದಾರೆ.

ಚಾನೆಲ್‌ಗೆ ನೀಡಿದ್ದ ಸಂದರ್ಶನವೊಂದರಲ್ಲಿ ನಟ ಅಮೀರ್ ಖಾನ್, ನನ್ನ ಮಕ್ಕಳು ಇಸ್ಲಾಂ ಧರ್ಮವನ್ನ ಖಡಾಖಂಡಿತವಾಗಿ ಪಾಲಿಸಬೇಕು. ಪಾಲಿಸುತ್ತಾರೆ ಎಂದು ಹೇಳಿದ್ದರ ಬಗ್ಗೆ ನಟಿ ಕಂಗನಾ ರಾಣಾವತ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿರುವ ಕಂಗನಾ, ನೀವು ನಿಮ್ಮ ಮಕ್ಕಳಿಗೆ ಅಲ್ಲಾನನ್ನ ಆರಾಧಿಸುವುದು ಮತ್ತು ಶ್ರೀ ಕೃಷ್ಣನ ಬಗ್ಗೆ ಭಕ್ತಿ ಮೂಡಿಸುವ ಪ್ರಯತವನ್ನ ಮಾಡಿ, ಇದು ಜಾತ್ಯಾತೀತೆ ತಾನೇ..? ಎಂದಿದ್ದಾರೆ.

ಅಲ್ಲು ಅರ್ಜುನ್ ನಟನೆಯ ತೆಲುಗಿನ ಬಹು ನಿರೀಕ್ಷಿತ ಚಿತ್ರ ಪುಷ್ಪದಲ್ಲಿ ಸ್ಯಾಂಡಲ್‌ವುಡ್ ನಟ ಮತ್ತು ನಟಿ ಮತ್ತು ಬಾಲಿವುಡ್ ಬೆಡಗಿಯೊಬ್ಬಳು ಮಿಂಚಲಿದ್ದಾಳೆಂದು ಸಖತ್ ಸುದ್ದಿಯಾಗಿದೆ. ಸ್ಯಾಂಡಲ್‌ವುಡ್‌ನ ರಶ್ಮಿಕಾ ಮಂದಣ್ಣ ಪುಷ್ಟ ಚಿತ್ರದ ನಟಿಯಾಗಿದ್ದರೆ, ನಟ ಉಪೇಂದ್ರ ಈ ಚಿತ್ರದ ವಿಲನ್ ಆಗಲಿದ್ದಾರಂತೆ. ಮತ್ತು ಬಾಲಿವುಡ್‌ನಿಂದ ಐಟಂ ಡಾನ್ಸ್‌ಗಾಗಿ ಶ್ರದ್ಧಾ ಕಪೂರ್‌ರನ್ನ ಚಿತ್ರತಂಡ ಕರೆಸಿಕೊಳ್ಳುತ್ತಿದೆ ಎಂಬ ಮಾತು ಕೇಳಿಬಂದಿದೆ.

ದೃಶ್ಯಂ, ಮದಾರಿಯಂಥ ಚಿತ್ರಗಳನ್ನ ನೀಡಿದ್ದ ನಿರ್ದೇಶಕ ನಿಶಿಕಾಂತ್ ಕಾಮತ್ ಇಂದು ಹೃದಾಯಾಘಾತದಿಂದ ನಿಧನರಾಗಿದ್ದಾರೆ. ನಿಶಿಕಾಂತ್ ಕಳೆದ ಎರಡು ವರ್ಷಗಳಿಂದ ಲಿವರ್ ಸಿರೋಸಿಸ್‌ನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ನಿಶಿಕಾಂತ್ ಸಾವಿಗೆ ಭಾರತೀಯ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author