Web News: ಅಘೋರಿಗಳನ್ನು ನೋಡಿದಾಗ ಸಾಮಾನ್ಯ ಜನರು ಭಯ ಪಡುತ್ತಾರೆ. ಆದರೆ ಅಘೋರಿಗಳು ಕೆಟ್ಟವರಲ್ಲ. ಕೇಡು ಬಯಸುವವರಲ್ಲ. ಅವರು ಶಿವನ ಭಕ್ತರು ಮಾತ್ರ. ಆದರೆ ಅವರ ವೇಷ ಭೂಷಣ ನೋಡಿ ಕೆಲವರಿಗೆ ಹೆದರಿಕೆಯಾಗಬಹುದು. ಅವರ ಜೀವನ ಹೇಗಿರುತ್ತದೆ ಎನ್ನುವ ಕುತೂಹಲ ಕೂಡ ಕೆಲವರಲ್ಲಿ ಇರುತ್ತದೆ. ಹಾಗಾಗಿಯೇ ನಾವು ಅಘೋರರಾಗಿರುವ ಡಾ.ಅಗರಭನತ್ ಅಘೋರ ಅವರ ಸಂದರ್ಶನ ಮಾಡಿದ್ದೇನೆ. ಅವರು ಅಘೋರಿಗಳು ಅಂದ್ರೆ ಯಾರು ಎಂದು ವಿವರಿಸಿದ್ದಾರೆ.
ಡಾ.ಅಗರಭನತ್ ಅಘೋರ ಅವರು ಹೇಳುವ ಪ್ರಕಾರ, ಯಾರು ಘೋರರಿರುವುದಿಲ್ಲವೋ, ಅವರೇ ಅಘೋರಿಗಳು. ಅಘೋರಿಗಳು ಶಿವನ ಭಕ್ತರು. ಶಿವನಿಗಾಗಿ, ಆತನಲ್ಲಿ ಲೀನವಾಗಲು ಏನೇನು ಸಾಧನೆ ಬೇಕೋ ಮಾಡಿ, ನಾಗಾಸಾಧುಗಳಾಗಿ, ಅಘೋರಿಗಳಾಗಿ, ನಂತರದಲ್ಲಿ ಅಘೋರಗಳಾಗಿ ಶಿವನಲ್ಲಿ ಸಂಪೂರ್ಣ ಲೀನರಾಗುತ್ತಾರೆ.
ಅಘೋರರಾಗಬೇಕು ಅಂದ್ರೆ ಅವರನ್ನು 12 ಅಡಿ ಆಳದಲ್ಲಿ ಧ್ಯಾನಾವಸ್ಥೆಯಲ್ಲಿ 9 ದಿನಗಳವರೆಗೆ ಇರಿಸಲಾಗುತ್ತದೆಯ. ಈ ವೇಳೆ ಅವರು ಸಾಧನೆಯಲ್ಲಿರುತ್ತಾರೆ. ಆ ಸಾಧನೆಯಲ್ಲಿ ಅವರಿಗೆ 9 ದಿನಗಳ ಕಾಲ ಶಿವ ಬೇರೆ ಬೇರೆ ರೂಪದಲ್ಲಿ ಕಾಣುತ್ತಾನೆ. 10ನೇ ದಿನ ಅವರನ್ನು ಆಚೆ ತೆಗೆಯುತ್ತಾರೆ. ಹಾಗೆ ಆಚೆ ಬಂದವರು ಮುಂದಿನ ಸಾಧನೆಗೆ ಅರ್ಹರಾಗುತ್ತಾರೆ. ಮತ್ತು ಯಾರು ಅಲ್ಲೋ ಪ್ರಾಣ ಕಳೆದುಕ“ಳ್ಳುತ್ತಾರೋ, ಅವರಿಗೆ ಆ ಸ್ಥಳದಲ್ಲೇ ಸಮಾಧಿ ಮಾಡಲಾಗುತ್ತದೆ ಅಂತಾರೆ ಡಾ. ಅಗರಭನತ್ ಅಘೋರ್ ಅವರು.
ಅಷ್ಟೇ ಅಲ್ಲದೇ, ಸ್ಮಶಾನದಲ್ಲಿ, ದಟ್ಟ ಕಾನನದಲ್ಲಿ ಹೀಗೆ ಹಲವು ಸ್ಥಳಗಳಲ್ಲಿ ಅಘೋರಿಯಾಗ ಬಯಸುವವರು ಅಷ್ಟ ದಿಗ್ಭಂಧನ ಹಾಕಿ, ಧ್ಯಾನ ಮಾಡಿ, ಶಿವ ಸಾನಿಧ್ಯ ಪಡೆಯುವ ಸಾಧನೆ ಮಾಡುತ್ತಾರೆ. ಅಗರಭನತ್ ಅವರಿಗೂ ಸ್ಮಶಾನದಲ್ಲಿ ಆತ್ಮವಿರುವ ವೈಬ್ರೇಶನ್ ಫೀಲ್ ಮಾಡಿದ್ದಾರೆ. ಅದರ ಜತೆ ಮನಸ್ಸು ಗಟ್ಟಿ ಮಾಡಿ, ಏಕಾಗೃತೆಯಿಂದ ಸಾಧನೆ ಮಾಡುವುದೇ ನಮಗೆ ಸವಾಲ್ ಅಂತಾರೆ ಡಾ.ಅಗರ್‌ಭನತ್ ಅಘೋರ ಅವರು. ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ಸಂದರ್ಶನ ವೀಕ್ಷಿಸಿ.