Thursday, October 30, 2025

Latest Posts

Sandalwood News: ನಾನು ಸ್ನಾನ ಮಾಡ್ತಿರ್ಲಿಲ್ಲ ಅವಕಾಶ ತಪ್ಪಿ ಹೋಯ್ತು!: Niranjan Shetty Podcast

- Advertisement -

Sandalwood News: ನಟ ನಿರಂಜನ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಬಾಲ್ಯ, ಶಿಕ್ಷಣ, ಸಿನಿಜರ್ನಿ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಟ ನಿರಂಜನ್ ಶೆಟ್ಟಿ ಕುಂದಾಪುರದ ಗುಲ್ವಾಡಿಯಲ್ಲಿ ಜನಿಸಿದ್ದು, ಓದಿದ್ದು, ಬೆಳೆದಿದ್ದು ಎಲ್ಲ ಅಲ್ಲೇ. 4ನೇ ಕ್ಲಾಸ್ ಮುಗಿದ ಮೇಲೆ ಉಡುಪಿಗೆ ಬಂದು ನಿರಂಜನ್ ಅವರು ತಮ್ಮ ಓದು ಮುಂದುವರಿಸಿದರು. ನಂತರ ಬ್ರಹ್ಮಾವರದಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ನಿರಂಜನ್‌ ಬಿಡಿಸಿದ ಚಿತ್ರ ಒಬ್ಬರ ಕೈಗೆ ಸಿಕ್ಕಿ, ಅವರು ಚಿತ್ರಕಲಾಾ ಪರಿಷತ್‌ಗೆ ನಿರಂಜನ್‌ ಅವರು ಸೇರಲು ಕಾರಣರಾದರು.

ಚಿತ್ರಕಲಾ ಪರಿಷತ್‌ನಲ್ಲಿ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅನ್ನುವಂತೆ, ನಿರಂಂಜನ್‌ಗೆ ಬೇಕಾಗಿದ್ದೆಲ್ಲ ಸಿಕ್ಕಿತು. ಚಿತ್ರಕಲೆ ಮಾತ್ರವಲ್ಲದೇ, ನಾಟಕ ಮಾಡಲು ಕೂಡ ಅಲ್ಲಿ ಅವಕಾಶವಿತ್ತು. ಆ ಕಾಲೇಜ್ ನಿರಂಜನ್‌ಗೆ ಎಷ್ಟು ಇಷ್ಟವಾಗಿತ್ತಂದ್ರೆ, ಬೆಳಿಗ್ಗೆ ಕಾಲೇಜ್ಗೆ ಬಂದ್ರೆ ಸಂಜೆ 7,8 ಗಂಟೆಗೆ ನಿರಂಜನ್ ಮನೆಗೆ ಹೋಗುತ್ತಿದ್ದರಂತೆ.

ಹೀಗೆ ಚಿತ್ರಕಲೆ ಜೊತೆ, ನಿರಂಜನ್‌ ನಾಟಕದಲ್ಲಿ ಭಾಗವಹಿಸಿ, ಅದರಲ್ಲೂ ಆಸಕ್ತಿ ಬೆಳೆಸಿಕೊಂಡರು. ಅಲ್ಲಿಂದ ಮುಂದೆ ಕಲಾಕ್ಷೇತ್ರದ ಪರಿಚಯವಾಯಿತು. ಹೀಗೆ ನಾಟಕದ ನಂಟು ಬೆಳೆದು, ಮುಂದೆ ನಿರಂಜನ್ ಸ್ಯಾಂಡಲ್‌ವುಡ್‌ಗೆ ಬರುವಂತಾಯಿತು. ಅವರ ಜೀವನದ ಇನ್ನಷ್ಟು ಕುತೂಹಲಕಾರಿ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss