Sandalwood News: ಅರಸಯ್ಯನ ಪ್ರೇಮಪ್ರಸಂಗ ಸಿನಿಮಾದ ಮೂಲಕ ಸಖತ್ ಸೌಂಡ್ ಮಾಡುತ್ತಿರುವ ನಟ ಮಹಾಂತೇಷ್ ಹಿರೇಮಠ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಹಲವು ಕುತೂಹಲಕಾರಿ ಮತ್ತು ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ.
ಮಹಾಂತೇಶ್ ಹಿರೇಮಠ ಅವರನ್ನು ಸ್ಕ್ರೀನ್ ಮೇಲೆ ನೋಡಿದಾಗ, ಹಲವರಿಗೆ ಇವರು ತಮಿಳಿಗರರು ಅಂತಾ ಅನ್ನಿಸಿರತ್ತೆ. ಆದರೆ ಇವರು ಬೇರೆ ರಾಜ್ಯದವರಲ್ಲ ಬದಲಾಗಿ ಅಪ್ಪಟ ಕನ್ನಡಿಗರು. ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರು ಮಹಾಂತೇಷ್ ಅವರನ್ನು ಕಂಡು, ಶಿವಾಜಿನಗರದವರು ಅಂತಾ ತಿಳಿದಿದ್ದರಂತೆ. ಬಳಿಕ ಇವರು ಕನ್ನಡಿಗರೇ ಅಂತಾ ಹೇಳಿದರಂತೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ ಎನ್ನುವ ಗ್ರಾಮದ ಯುವಕ ಮಹಾಂತೇಶ್. ಓದಲ್ಲಿ ಆಸಕ್ತಿ ಇಲ್ಲದ ಮಹಾಂತೇಶ್‌ಗೆ ನಟನೆಯಲ್ಲಿ ಹೆಚ್ಚು ಆಸಕ್ತಿ. ಹಾಗಾಗಿ ಬಾಲ್ಯದಲ್ಲಿ ಹೆಚ್ಚು ಟಿವಿ ನೋಡುವ ಹುಚ್ಚು. ಹೀಗಿರುವಾಗ, ಪಕ್ಕದ ಮನೆಯಲ್ಲಿ ಬಾಡಿಗೆಗೆ ಬಂದಿದ್ದ ಓರ್ವ ಮಹಿಳೆ, ಫ್ರೀಯಾಗಿ ನಟನಾ ತರಬೇತಿ ನೀಡುವ ಕಾಲೇಜಿನ ಬಗ್ಗೆ ಮಾತನಾಡಿದ್ದರಂತೆ. ಅವರ ಮಕ್ಕಳನ್ನು ಅಲ್ಲೇ ಸೇರಿಸಬೇಕು ಎಂದು ಬಯಸಿದ್ದರಂತೆ.
ಇತ್ತ ಮಹಾಂತೇಶ್ ಮನೆಯಲ್ಲಿ ಮಹಾಂತೇಷ್ ಮತ್ತು ಅವರ ಅಮ್ಮ ಇಬ್ಬರೂ ಮನೆಯಲ್ಲಿ ಬರೀ ಜಗಳ ಮಾಡುತ್ತಿದ್ದರು. ಇದರಿಂದ ರೋಸಿಹೋಗಿದ್ದ ಅವರ ಪೋಷಕರು ಮಹಾಂತೇಶ್ ಅವರನ್ನು ಈ ತರಬೇತಿಗೆ ಸೇರಿಸಲು ನಿರ್ಧರಿಸಿದರು. ಹೀಗೆ ಮಹಾಂತೇಷ್ ಮೈಸೂರಿನ ಕಾಲೇಜಿನಲ್ಲಿ ನಟನಾ ತರಬೇತಿಗೆ ಸೇರಿದರು.
5ನೇ ಕ್ಲಾಸಿನಿಂದ ಮೈಸೂರಿನ ಹತ್ತಿರವೇ ಇದ್ದ ಸುತ್ತೂರು ಮಠದಲ್ಲಿ ಮಹಾಂತೇಶ್ ವಿದ್ಯಾಭ್ಯಾಸ ಮುಂದುವರಿಸಿದರು. ಇವರು ಓದುತ್ತಿದ್ದ ಶಾಲೆಯಲ್‌ಲಿ ಬಂದ ಹೊಸ ಪ್ರಿನ್ಸಿಪಲ್ ಅವರು ವೀಕೆಂಡ್‌ನಲ್ಲಿ ಮಕ್ಕಳಿಗೆ ಅರ್ಥಪೂರ್ಣವಾದ ಸಿನಿಮಾ ತೋರಿಸುತ್ತಿದ್ದರು. ಹೀಗೆ ಮರೆಯಾಗಿದ್ದ ಸಿನಿಮಾ ಹುಚ್ಚು ಮತ್ತೆ ಚಿಗುರಿತು. ಬಳಿಕ ಹಲವು ಪ್ರಯತ್ನಗಳನ್ನು ಮಾಡಿ, ಮಹಾಂತೇಷ್ ಸಿನಿ ಕ್ಷೇತ್ರಕ್ಕೆ ಬಂದರು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

