Sandalwood: ಸ್ಯಾಂಡಲ್‌ವುಡ್ ಪ್ರಸಿದ್ಧ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಜಾತಿಗಳ ಬಗ್ಗೆ ಮಾತನಾಡಿದ್ದಾರೆ.
ಚಂದ್ರಶೇಖರ್ ಅವರು ನಗರವನ್ನೂ ನೋಡಿದ್ದಾರೆ, ಹಳ್ಳಿಯನ್ನೂ ನೋಡಿದ್ದಾರೆ. ಮೇಲ್ವರ್ಗ-ಕೆಳವರ್ಗ ಎಲ್ಲವನ್ನೂ ನೋಡಿರುವುದರಿಂದ ಆ ಬಗ್ಗೆ ಅಭಿಪ್ರಾಯ ತಿಳಿಸಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ಅದೆಷ್ಟೋ ಸಮಾಜ ಸುಧಾರಕರು ಬಂದು ಕೆಲವು ಜಾತಿಗಳ ಪರ ನಿಂತು ಹೋರಾಟ ಮಾಡಿದರೂ ಕೂಡ, ಇದುವರೆಗೂ ಆ ಜಾತಿಗೆ ಆಗುತ್ತಿರುವ ಅವಮಾನ ಕಡಿಮೆಯಾಗಿಲ್ಲ. ಇನ್ನೂ ಕೆಲವು ಊರುಗಳಲ್ಲಿ ಆ ಜಾತಿಯವರನ್ನು ಆಚೆ ಇಡುತ್ತಿದ್ದಾರೆ. ಇಂಥ ವಿಷಯ ಗ್ರಾಮೀಣ ಕಥೆಗಳಲ್ಲಿ ಕಾಣುತ್ತೆ. ನಗರದ ಕಥೆಗಳಲ್ಲಿ, ನಗರದಲ್ಲಿ ಜೀವಿಸುವ ರೀತಿ ಎಲ್ಲ ಇರುತ್ತದೆ ಅಂತಾರೆ ಚಂದ್ರಶೇಖರ್.
ಇನ್ನು ಚಂದ್ರಶೇಖರ್ ಅವರು ಹಲವು ವಿಷಯಗಳಲ್ಲಿ ಜ್ಞಾನ ಉಳ್ಳವರು. ಅವರಿಗೆ ಇದೆಲ್ಲ ಮಾಡಲು ಹೇಗೆ ಸಮಯ ಸಿಗುತ್ತದೆ ಎಂದು ಕೇಳಿದಾಗ, ನಾವು ನಮ್ಮ 24 ಗಂಟೆಗಳನ್ನು 80 ಗಂಟೆ ಎಂದು ತಿಳಿಯಬೇಕು. ಇರುವ ಆಯುಷ್ಯವನ್ನು ಸಾವಿರ ವರ್ಷ ಎಂದು ತಿಳಿಯಬೇಕು. ಆ ರೀತಿಯಾಗಿ ನಮ್ಮ ಸಮಯವನ್ನು ನಾವು ಆಯಾ ಕೆಲಸಗಳಿಗಾಗಿ ಡಿವೈಡ್ ಮಾಡಿ ಮೀಸಲಿಡಬೇಕು ಅಂತಾರೆ ನಿರ್ದೇಶಕರು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

