Sandalwood: ನಮಗೆಲ್ಲ ಸ್ಯಾಂಡಲ್ವುಡ್ ನಿರ್ದೇಶಕರಾಾಗಿ ಪರಿಚಯವಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಅವರು, ಬರೀ ನಿರ್ದೇಶಕರು ಮಾತ್ರವಲ್ಲ. ಅವರು ಶಿಕ್ಷಕರಾಾಗಿದ್ದವರು. ಆಗಾಗ ಪ್ರವಾಸ ಮಾಡುವ ಪಯಣಿಗ. ಅವರಿಗೆ ಯಾವ ಕ್ಷೇತ್ರ ಇಷ್ಟ ಅನ್ನೋದನ್ನು ಅವರ ಮಾತಿನಲ್ಲೇ ಕೇಳಿ.
ನಾಗತೀಹಳ್ಳಿಯವರಿಗೆ ಶಿಕ್ಷಕರು, ನಿರ್ದೇಶಕರು, ಪ್ರವಾಸಿಗ ಎಲ್ಲದರಲ್ಲೂ ಕುತೂಹಲವಿದೆ. ಅವರು ನಿರ್ದೇಶಕರಾದಾಗ ಅದರಲ್ಲೇ ಗಮನ ಹರಿಸುತ್ತಾರೆ. ಪ್ರವಾಸಕ್ಕೆ ಹೋದಾಗ, ಯಾವುದಕ್ಕೂ ತಲೆಕೆಡಿಸಿಕ“ಳ್ಳದೇ, ಅಲೆಮಾರಿಯ ರೀತಿ ಇರುತ್ತಾರೆ ಅಂತಾ ಅವರೇ ಹೇಳುತ್ತಾರೆ.
ಎಲ್ಲ ಕ್ಷೇತ್ರಗಳಲ್ಲಿ ನಮಗೆ ಸಿಗುವ ಅನುಭವ ನಮ್ಮ ಅನುಭವದ ಶ್ರೀಮಂತಿಕೆಯನ್ನು ಬೆಳೆಸುತ್ತದೆ. ನಾನು ಯಾವ ಕ್ಷೇತ್ರಕ್ಕೆ ಕೆಲಸಕ್ಕೆ ಹೋಗುತ್ತೇನೋ, ಆ ಕ್ಷೇತ್ರಕ್ಕೆ ಬೇಕಾದ ಎಲ್ಲ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನೀಡುತ್ತೇನೆ ಅಂತಾರೆ ನಾಗತೀಹಳ್ಳಿ ಚಂದ್ರಶೇಖರ್.
ನಾನು ಶಾಲೆ ಮಕ್ಕಳಿಗೆ ಹೇಳಿಕ“ಡುವಾಗ, ನನ್ನ ಮನಸ್ಸಿನಲ್ಲಿ ನಾನು ನಿರ್ದೇಶಕ ಅನ್ನುವ ಹಮ್ಮು ಇರಬಾರದು. ಪ್ರವಾಸಿಯಾಗಿ ಹೋದಗ ಅಲ್ಲಿ ಅಲೆಮಾರಿಯಾಗಿರಬೇಕು. ಈ ರೀತಿ ಇರಲು ಇಚ್ಛಿಸುತ್ತಾರಂತೆ ಚಂದ್ರಶೇಖರ್.
ಇನ್ನು ತಮ್ಮ ಊರಾದ ನಾಗತೀಹಳ್ಳಿಯನ್ನು ಮುಂಚೆ ಇರಿಸಿ ನಿಮ್ಮ ಹೆಸರನ್ನು ನಂತರ ಇಟ್ಟುಕ“ಂಡಿದ್ದರ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಚಂದ್ರಶೇಖರ್, ಊರ ಹೆಸರನ್ನು ಇರಿಸಿಕ“ಳ್ಳೋದು Doಡ್ಡದಲ್ಲ. ಬದಲಾಗಿ ಆ ಊರಿಗೆ ಮುಖ ಮಾಡಿ, ಅದರ ಸಮಸ್ಯೆಗಳನ್ನು ಅರಿತು ನಡೆಯುವುದು ಮುಖ್ಯ. ನಾನು ನನ್ನಿಂದ ಆದ ಪ್ರಯತ್ನಗಳನ್ನು ಮಾಡಿ, ಊರಿಗೆ ಏನೇನು ವ್ಯವಸ್ಥೆ ಬೇಕೋ, ಅದರಲ್ಲಿ ಕೆಲ ವ್ಯವಸ್ಥೆ ಮಾಡಿ, ನನ್ನ ಸಹೋದರ ಸಹೋದರಿ ಜತೆ ಬದುಕುತ್ತಿದ್ದೇನೆ ಅಂತಾರೆ ಚಂದ್ರಶೇಖರ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

