- Advertisement -
Mandya News: ಮಂಡ್ಯ: ಮಂಡ್ಯದ ಮದ್ದೂರಿನಲ್ಲಿ ಭಯಾನಕ ಅಪಘಾತ ಸಂಭವಿಸಿದ್ದು, ಗೂಡ್ಸ್ ಆಟೋ ಮತ್ತು ಕಾರ್ ನಡುವೆ ಡಿಕ್ಕಿಯಾಗಿ, ಕಾರು ಡಿಕ್ಕಿಯಾದ ರಭಸಕ್ಕೆ ಗೂಡ್ಸ್ ಆಟೋ ಹಾರಿದೆ.
ಮಂಡ್ಯದ ಮದ್ದೂರಿನ ಚಾಮನಹಳ್ಳಿ ಬಳಿ ತಡರಾತ್ರಿ ಈ ಘಟನೆ ನಡೆದಿದ್ದು, ಗೂಡ್ಸ್ ಆಟೋ ಚಾಲಕ ರಾಜುಗೆ ಗಂಭೀರ ಗಾಯವಾಗಿದೆ. ಗಂಭೀರವಾಗಿ ಗಾಯಗೊಂಡ ಆಟೋ ಚಾಲಕನನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನು ಈ ಅಪಘಾತ ನಡೆಯುವಾಗ ಅಲ್ಲೇ ಇದ್ದ ಬೈಕ್ ಚಾಲಕ ಸ್ವಲ್ಪದರಲ್ಲೇ ಬಚಾವಾಗಿ ಜೀವ ಉಳಿಸಿಕೊಂಡಿದ್ದಾನೆ. ಈತ ಗೂಡ್ಸ್ ಆಟೋ ಚಾಲಕನ ಬಳಿ ಮಾತನಾಡಿ, ಆಗಷ್ಟೇ ಹೊರಟಿದ್ದು, ಆ ಕ್ಷಣವೇ ವೇಗವಾಗಿ ಬಂದ ಕಾರ್ ಆಟೋಗೆ ಡಿಕ್ಕಿಯಾಗಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
- Advertisement -

