ಪ್ರತಿದಿನ ನೀವು ಫಿಟ್ ಆ್ಯಂಡ್ ಫೈನ್ ಆಗಿರಬೇಕು ಅಂದ್ರೆ ನಾವಿವತ್ತು ಹೇಳೋ ಟಿಪ್ಸ್ ಫಾಲೋ ಮಾಡಿ. ಏನು ಆ ಟಿಪ್ಸ್ಅನ್ನೋದನ್ನ ನೋಡೋಣ.

ನಾವು ಫಿಟ್ ಆಗಿರಲು ಪ್ರತಿದಿನ ಏನೇನು ಮಾಡಬೇಕು ಅನ್ನೋದರ ಬಗ್ಗೆ ಟೈಮ್ ಟೇಬಲ್ ಹಾಕಿಕೊಳ್ಳಬೇಕು. ಮತ್ತು ಆ ಟೈಮ್ ಟೇಬಲ್ನ್ನ ಫಾಲೋ ಕೂಡ ಮಾಡಬೇಕು. ಅದನ್ನ ಫಾಲೋ ಮಾಡಿ ಒಂದೆರಡು ವಾರದಲ್ಲೇ, ಟೈಮ್ ಟೇಬಲ್ ನೋಡದೇ, ಅದನ್ನ ಫಾಲೋ ಮಾಡೋ ಪರಿ ಅರಿತಿರಬೇಕು. ಹಾಗಾದ್ರೆ ನಮ್ಮ ಟೈಮ್ ಟೇಬಲ್ನಲ್ಲಿ ಏನೇನು ಇರಬೇಕು ಅನ್ನೋದನ್ನ ನೋಡೋಣ ಬನ್ನಿ.
ಮೊದಲನೇಯದಾಗಿ ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಉಗುರು ಬೆಚ್ಚಿನ ನೀರು ಕುಡಿಯಬೇಕು. ಸಾಧ್ಯವಾದರೆ ಅದಕ್ಕೆ ಒಂದು ಸ್ಪೂನ್ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ಕುಡಿಯಿರಿ. ಇದರಿಂದ ಬಾಡಿ ಡೆಟಾಕ್ಸ್ ಆಗುತ್ತದೆ. ತೂಕ ಕಡಿಮೆಯಾಗುತ್ತದೆ.
ಎರಡನೇಯದಾಗಿ ಎಕ್ಸ್ಟ್ರಾ ಫ್ಯಾಟ್ ಮತ್ತು ಕ್ಯಾಲರಿ ಕಡಿಮೆ ಮಾಡಲು ವ್ಯಾಯಾಮ ಮಾಡಿ. ಸರಳ ವ್ಯಾಯಾಮಗಳನ್ನ ಮಾಡಲು ರೂಢಿಸಿಕೊಂಡ ಬಳಿಕ, ಕಠಿಣ ವ್ಯಾಯಾಮವನ್ನ ರೂಢಿಸಿಕೊಳ್ಳಿ. ವ್ಯಾಯಮ ಮಾಡುವದರಿಂದ ಫಿಟ್ ಆಗಿರಬಹುದಲ್ಲದೇ, ಆರೋಗ್ಯಾಭಿವೃದ್ಧಿಯಲ್ಲೂ ಇಗು ಸಹಕಾರಿಯಾಗಿದೆ. ಆದ್ರೆ ಮನಸ್ಸಿಗೆ ಬಂದಹಾಗೆ ವ್ಯಾಯಾಮ ಮಾಡಕೂಡದು, ಕಲಿತು ವ್ಯಾಯಮ ಮಾಡಬೇಕು.
ಇದಾದ ಬಳಿಕ ಹೆಲ್ದಿ ತಿಂಡಿ ತಿನ್ನಬೇಕು. ಆರೋಗ್ಯಕರ ತಿಂಡಿ ಸೇವನೆಯಿಂದ ಇಡೀ ದಿನ ಉತ್ತಮವಾಗಿರುತ್ತದೆ. ದಿನಪೂರ್ತಿ ಉಲ್ಲಸಿತರಾಗಿರುವಂತೆ ಮಾಡುತ್ತದೆ. ಹಿರಿಯರು ಹೇಳಿದಂತೆ ರಾತ್ರಿ ಕಡಿಮೆ ಉಂಡರೂ ಪರವಾಗಿಲ್ಲ, ಆದ್ರೆ ಬೆಳಿಗ್ಗೆ ಗಟ್ಟಿ ಮತ್ತು ಆರೋಗ್ಯಕರ ತಿಂಡಿ ತಿನ್ನಬೇಕು. ಇನ್ನು ತಿಂಡಿಯಲ್ಲಿ ಪುರಿ, ಮಸಾಲೆ ದೋಸೆ ರೀತಿ ಎಣ್ಣೆ ಪದಾರ್ಥಗಳನ್ನೆಲ್ಲ ಸೇವಿಸಕೂಡದು. ಹಣ್ಣು ಹಂಪಲು, ಹಾಲು, ಇಡ್ಲಿ, ಅವಲಕ್ಕಿ, ಉಪ್ಪಿಟ್ಟು, ಓಟ್ಸ್ ಇವುಗಳನ್ನ ಸೇವಿಸಬಹುದು.
ಇನ್ನು ಮಧ್ಯಾಹ್ನದ ಊಟದ ವೇಳೆ ತರಕಾರಿ, ಸೂಪ್, ಚಪಾತಿ, ಗಂಜಿಊಟ ಮಾಡಲು ಯೋಗ್ಯವಾಗಿರುತ್ತದೆ. ಅನ್ನದ ಸೇವನೆಗಿಂತ ಮಿಲೇಟ್ಸ್ನಿಂದ ಮಾಡಿದ ತಿನಿಸು ತಿಂದರೆ ಉತ್ತಮ.
ಸಂಜೆ ವೇಳೆ ಜಂಕ್ ಫುಡ್, ಟೀ ಕಾಫಿ ಸೇವನೆ ಬದಲು, ಕಶಾಯ, ಜ್ಯೂಸ್, ಮಿಲ್ಕ್ ಶೇಕ್, ಅಂಬಲಿ, ಹೆಲ್ದಿ ಸ್ನ್ಯಾಕ್ಗಳನ್ನ ತಿನ್ನಿ. ಹಣ್ಣು ಹಂಪಲು ತಿಂದರೂ ಓಕೆ.
ಇನ್ನು ರಾತ್ರಿ ಊಟದ ವೇಳೆ ಮೊಸರು ನಿಷಿದ್ಧ. ಈ ವೇಳೆ ತುಪ್ಪ, ಚಪಾತಿ ಅಥವಾ ರೊಟ್ಟಿ, ದಾಲ್, ಸೂಪ್ ಈ ರೀತಿಯ ಊಟ ಸೇವಿಸಿ.
ಕೊನೆಯದಾಗಿ ರಾತ್ರಿ ಮಲಗುವಾಗ ಅರಿಷಿನ ಹಾಲು ಮಾಡಿ ಕುಡಿಯಿರಿ. ಹಾಲು ಕುದಿಯುವಾಗ ಚಿಟಿಕೆ ಅರಿಷಿನ, ಏಲಕ್ಕಿ, ಲವಂಗ, ಚಕ್ಕೆ, ಶುಂಠಿ, ಜೀರಿಗೆ, ಕಲ್ಲು ಸಕ್ಕರೆ, ಒಂದು ಡ್ರಾಪ್ ತುಪ್ಪ ಹಾಕಿ ಕುದಿಸಿದರೆ ಗೋಲ್ಡನ್ ಮಿಲ್ಕ್ ರೆಡಿ. ಈ ಹಾಲಿಗೆ ಅವಶ್ಯಕತೆ ಎನ್ನಿಸಿದ್ದಲ್ಲಿ ಕೇಸರಿ ದಳ ಸೇರಿಸಿ ಸೇವಿಸಿ. ಇವಿಷ್ಟು ಟಿಪ್ಸ್ ನೀವು ಫಾಲೋ ಮಾಡಿದ್ರೆ, ಫಿಟ್ ಆ್ಯಂಡ್ ಫೈನ್ ಆಗಿರ್ತೀರಾ.
Shravani Somayaji, Karnataka TV

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

