ಮೈಸೂರು: ರಾಜೀವ್ ಗಾಂಧಿ ಭ್ರಷ್ಟಾಚಾರಿ ಅನ್ನೋ ಹೇಳಿಕೆ ವಿಚಾರವಾಗಿ ದೆಹಲಿ ಹೈಕೋರ್ಟ್ ಪ್ರಧಾನಿ ಮೋದಿಯನ್ನು ಆರೋಪ ಮುಕ್ತ ಮಾಡಿದ್ದಾಯ್ತು. ಆದ್ರೆ ಇದೀಗ ಸ್ವಪಕ್ಷದ ಹಿರಿಯ ಮುಖಂಡರೊಬ್ಬರಿಂದ ಮೋದಿ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.
ಹೌದು ಇತ್ತೀಚೆಗೆ ಲಕ್ನೌ ನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಕಾಂಗ್ರೆಸ್ ನ ರಾಹುಲ್ ಗಾಂಧಿಯನ್ನು ಟೀಕಿಸೋ ಭರಾಟೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭ್ರಷ್ಟರಾಗಿಯೇ ನಿಧನರಾದ್ರು ಅಂತ ಹೇಳಿಕೆ ನೀಡಿದ್ರು. ಇದೀಗ ಪ್ರಧಾನಿ ಮೋದಿ ಇಂತಹ ಹೇಳಿಕೆ ನೀಡಿರೋದು ಸರಿಯಲ್ಲ ಅಂತ ಮೈಸೂರಿನಲ್ಲಿ ಬಿಜೆಪಿ ಹಿರಿಯ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ. ರಾಜೀವ್ ಗಾಂಧಿ ಎಂದೂ ಸಹ ಭ್ರಷ್ಟಾಚಾರದ ಬಗ್ಗೆ ಮಾತನಾಡಿಲ್ಲ. ಅವರು ರಾಜಕೀಯಕ್ಕೆ ಬಂದಾಗಲೇ ಶುದ್ಧ ಹಸ್ತರು ಅಂತ ಸಾಬೀತುಪಡಿಸಿದ್ರು. ಹಣ ಮಾಡಲು ರಾಜಕೀಯಕ್ಕೆ ಬಾರದೆ ತಮ್ಮ ಕುಟುಂಬದ ಮೇಲೆ ಜನತೆ ಇಟ್ಟಿಗೆ ಗೌರವಕ್ಕಾಗಿ ಬಂದಿದ್ದೇನೆ ಅಂತ ರಾಜೀವ್ ಹೇಳಿದ್ದರು. ರಾಜೀವ್ ಗಾಂಧಿಯವರ ಬಗ್ಗೆ ರಾಜಕೀಯ ಧುರೀಣ ವಾಜಪೇಯವರೇ ಒಳ್ಳೇ ಮಾತುಗಳನ್ನಾಡಿದ್ರು.ದೇಶಕ್ಕೋಸ್ಕರ ಪ್ರಾಣ ತೆತ್ತ ರಾಜೀವ್ ಗಾಂಧಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂಥಾ ಮಾತುಗಳನ್ನಾಡಿದ್ದು ನನಗೆ ಬೇಸರ ತಂದಿದೆ ಅಂತ ಶ್ರೀನಿವಾಸ್ ಪ್ರಸಾದ್ ಹೇಳಿದ್ರು.