Sandalwood: ಹಣ ಇದ್ರೆ ಮಾತ್ರ ನಟನಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ನಟ ರಿತ್ವಿಕ್ ಕೃಪಾಕರ್, ಹಾಗೇನಿಲ್ಲ. ಯಶ್, ರಜನಿಕಾಂತ್ ಸರ್ ಹೀರೋ ಆಗಿದ್ದಾರೆ ಅಂತಾ ಹೇಳಿದ್ದಾರೆ.
ರಜನಿಕಾಂತ್ ಕಂಡಕ್ಟರ್ ಆಗಿದ್ದರು, ಯಶ್ ಮೆಡಿಕಲ್ ಸ್ಟೋರ್ ನಲ್ಲಿ ಇದ್ದವರು. ಅವರೆಲ್ಲ ಹೀರೋ ಆಗಲಿಲ್ಲವಾ..? ಹಣಕ್ಕಿಂತ ಪ್ರತಿಭೆ ಮುಖ್ಯ. ಶ್ರಮ ಪ್ರತಿಭೆ ಇದ್ದರೆ, ಅದೇ ನಮ್ಮನ್ನು ಯಶಸ್ಸಿನ ಕಡೆ ಕರೆದ“ಯ್ಯುತ್ತದೆ ಅಂತಾರೆ ರಿತ್ವಿಕ್.
ಇನ್ನು ನನಗ್ಯಾರೂ ಗಾಡ್ ಫಾದರ್ ಇಲ್ಲ. ಹಾಗೇದ್ದರೆ ನಾನು ಆ ಚೌಕಟ್ಟಿನಲ್ಲೇ ಇರಬೇಕಾಗುತ್ತದೆ. ಹಾಗಾಗಿ ನನಗೆ ಗಾಡ್ ಫಾದರ್ ಅವಶ್ಯಕತೆ ಇಲ್ಲ ಅಂತಾ ಹೇಳ್ತಾರೆ ರಿತ್ವಿಕ್. ಅಲ್ಲದೇ ನನ್ನ ಅಪ್ಪನ ಹೆಸರನ್ನು ಕೂಡ ನಾನು ಎಲ್ಲೂ ಹೇಳಲ್ಲ. ನನ್ನ ಅಪ್ಪನಿಂದ ಜನ ನನ್ನನ್ನು ಗುರುತಿಸುವ ಬದಲು, ನನ್ನ ಟ್ಯಾಲೆಂಟ್ನಿಂದಲೇ ಜನ ನನ್ನನ್ನು ಗುರುತಿಸಲಿ ಅಂತಾರೆ ರಿತ್ವಿಕ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




