Recipe: ಬೇಕಾಗುವ ಸಾಮಗ್ರಿ: 2 ಬೀಟ್‌ರೂಟ್, 1 ಕಪ್ ಕಾರ್ನ್ ಫ್ಲೋರ್, 1 ಕಪ್ ಸಕ್ಕರೆ ಅಥವಾ ಬೆಲ್ಲ, ಕಾಲು ಕಪ್ ತುಪ್ಪ, ಹುರಿದ ಡ್ರೈಫ್ರೂಟ್ಸ್.
ಮಾಡುವ ವಿಧಾನ: ಬೀಟ್ರೂಟ್ ಸಿಪ್ಪೆ ತೆಗೆದು ಕ್ಲೀನ್ ಮಾಡಿ, ಸಣ್ಣಗೆ ಕತ್ತರಿಸಿ. ಬಳಿಕ ನೀರು ಹಾಕಿ ರುಬ್ಬಿ, ಪೇಸ್ಟ್ ತಯಾರಿಸಿ. ಇಲ್ಲಿ ಹೆಚ್ಚು ನೀರು ಬಳಸಬೇಡಿ. ಪೇಸ್ಟ್ ಮಾಡಿಯಾದ ಬಳಿಕ. ಇದನ್ನು ಸೋಸಿ, ರಸ ಬೇರೆ ಪೇಸ್ಟ್ ಬೇರೆ ಮಾಡಿ. ಈಗ ಬೀಟ್‌ರೂಟ್ ಜ್ಯೂಸ್ ರೆಡಿ.
ಈಗ 1 ಪ್ಯಾನ್ಗೆ ಜ್ಯೂಸ್ ಹಾಕಿ, 1 ಕಪ್ ಕಾರ್ನ್ ಫ್ಲೋರ್ ಹಾಕಿ, ಗಂಟು ಬಾರದ ಹಾಗೆ ಮಿಕ್ಸ್ ಮಾಡಿ. ಈಗ ಗ್ಯಾಸ್ ಆನ್ ಮಾಡಿ, ಮಂದ ಉರಿಯಲ್ಲಿ ಕೈಯಾಡಿಸುತ್ತ ಮಿಕ್ಸ್ ಮಾಡಿ. ಈಗ ಈ ಮಿಶ್ರಣ ಮಂದವಾಗುತ್ತ ಬರುತ್ತದೆ.
ಹಲ್ವಾ ಹದಕ್ಕೆ ಬಂದಾಗ ನೀವು ಇದಕ್ಕೆ ಸಕ್ಕರೆ ಅಥವಾ ಬೆಲ್ಲ ಸೇರಿಸಬೇಕು. 1 ಕಪ್ ಬೆಲ್ಲ ಸೇರಿಸಿ. ಬಳಿಕ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣ ಹಲ್ವಾದ ಹದಕ್ಕೆ ಬಂದ ಬಳಿಕ, ಪ್ಲೇಟ್‌ಗೆ ತುಪ್ಪ ಸವರಿ ಹಲ್ವಾ ಮಿಶ್ರಣವನ್ನು ಅದಕ್ಕೆ ಹಾಕಿ, ಸೆಟ್ ಮಾಡಿ. ಮೇಲಿಂದ ಹುರಿದ ಡ್ರೈಫ್ರೂಟ್ಸ್ ಸೇರಿಸಿದರೆ, ಹಲ್ವಾ ರೆಡಿ. ಬಿಸಿ ಇರುವಾಗಲೇ ಹಲ್ವಾ ಕಟ್ ಮಾಡಿದರೆ ಉತ್ತಮ.




