Sandalwood: ನಟ ಬಾಲ್ರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸಿನಿಮಾದಲ್ಲಿ ಆಗಬಹುದಾದ ಕಹಿ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಲ್ರಾಜ್, ನನಗೆ ಇದುವರೆಗೂ ಯಾವುದೇ ಅವಮಾನ, ಬೇಸರದ ವಿಷಯ ಸಿನಿಮಾ ಪಯಣದಲ್ಲಿ ಆಗಿಲ್ಲ. ನನ್ನ ಗಾಡಿಯಲ್ಲಿಯೇ ನಾನು ಶೂಟಿಂಗ್ಗೆ ಹೋಗ್ತೀನಿ. ಅರ್ಜೆಂಟ್ ಇದ್ರೆ ಫ್ಲೈಟ್ ಕೇಳುತ್ತೇನೆ. ಸೆಟ್ನಲ್ಲಿ ನಾನು ಊಟ ಮಾಡಲ್ಲ. ನನ್ನ ಊಟ ನಾನೇ ತೆಗೆದುಕ“ಂಡು ಹೋಗುತ್ತೇನೆ. ಇನ್ನು ಕರೆದವರೆಲ್ಲ ಸರಿಯಾಗಿ ಪಾತ್ರ ನೀಡಿದ್ದಾರೆಂದು ಹೇಳ್ತಾರೆ ಬಲ್ರಾಜ್.
ಅಲ್ಲದೇ, ನಾನು ಯಾರಾದ್ರೂ ನಟನೆಗೆ ಕರಿಯಲಿ ಅನ್ನೋ ನಿರೀಕ್ಷೆಯಲ್ಲೇ ಇರೋದಿಲ್ಲ. ಹಾಗಾಗಿ ನಿರೀಕ್ಷೆ ಇಲ್ಲದಿರುವಾಗ, ಯಾವುದೇ ವಿಷಯ ಕಷ್ಟ, ಅವಮಾನ ಅಂತಾ ಅನ್ನಿಸೋದೇ ಇಲ್ಲ ಅಂತಾರೆ ಬಲ್ರಾಜ್. ಇನ್ನು ಸಿನಿಮಾ ರಂಗದಲ್ಲಿ ಬದುಕು ಕಟ್ಟಿಕ“ಳ್ಳುವುದು ಕಷ್ಟ ಎಂದಿರುವ ಬಲ್ರಾಜ್, ಹೀಗೆ ಆಗೋದ್ಯಾವಾಗ ಅಂದ್ರೆ, ಸಿನಿಮಾವನ್ನೇ ನೀವು ಪ್ರಪಂಚ ಎಂದುಕ“ಂಡಾಗ. ಸಿನಿಮಾದಿಂದಲೇ ಜೀವನ ನಡೆಯಬೇಕು ಎಂದಾಗಲೇ ನಿಮಗೆ ಸಮಸ್ಯೆ ಎದುರಾಗುತ್ತದೆ. ಆದರೆ ಸಿನಿಮಾ ಜತೆ ಬೇೆರೆ ಕೆಲಸವಿದ್ದರೆ ಸಮಸ್ಯೆ ಇಲ್ಲವೆಂದಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

