Sandalwood: ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ತಾವು ಬಿಗ್ಬಾಸ್ನಲ್ಲಿ ಇದ್ದಾಗ, ಯಾವ ರೀತಿಯ ಟಾಸ್ಕ್ಗಳನ್ನು ನೀಡುತ್ತಿದ್ದರು. ಆರ್ಯವರ್ಧನ ಗುರೂಜಿ ಜತೆ ಆಡಿದ ಆಟದ ಬಗ್ಗೆ ನೆನಪು ಮಾಡಿದ್ದಾರೆ.
ಆರ್ಯವರ್ಧನ ಗುರೂಜಿ ಆಗಾಗ ಬಿಗ್ಬಾಸ್ನಲ್ಲಿ ಭವಿಷ್ಯ ಹೇಳುತ್ತಿದ್ದರು. ಅದೇ ರೀತಿ ರೂಪೇಶ್ ರಾಜಣ್ಣ ಅವರಿಗೆ ಇವತ್ತಿನ ಟಾಸ್ಕ್ನಲ್ಲಿ ಕಪ್ಪು ಬಣ್ಣದ ವಸ್ತುವನ್ನು ನೀಡಿದ್ರೆ ನೀವು ಸೋಲುತ್ತೀರಿ ಎಂದು ಭವಿಷ್ಯ ನುಡಿದಿದ್ದರಂತೆ.
ಆದರೆ ಆ ಟಾಸ್ಕ್ನಲ್ಲಿ ಕಪ್ಪು ಬಣ್ಣದ ವಸ್ತು ಇದ್ದರೂ ಕೂಡ ರೂಪೇಶ್ ರಾಜಣ್ಣ ಇದ್ದ ಟೀಂ ಗೆಲ್ಲುತ್ತದೆ. ಆಗ ರೂಪೇಶ್ ಆರ್ಯವರ್ಧನ್ ಬಳಿ ಹೋಗಿ, ನೀವು ಹೇಗೆ ಸುಳ್ಳು ಭವಿಷ್ಯ ಹೇಳಿದ್ರಿ ಅಂತಾ ಪ್ರಶ್ನಿಸಿದ್ದರಂತೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು ಎಂದು ರೂಪೇಶ್ ರಾಜಣ್ಣ ನೆನಪಿಸಿಕ“ಂಡಿದ್ದಾರೆ.
ಈ ವೇಳೆ ಆರ್ಯವರ್ಧನ್ ತಮ್ಮ ಭವಿಷ್ಯ ತಪ್ಪಾಯ್ತು ಎಂದು ಎಲ್ಲರೆದೆರು ರೂಪೇಶ್ ಅವಮಾನಿಸಿದರು ಎಂದು ಜೋರಾಗಿ ಬೆನ್ನಿಗೆ ಬಡಿದಿದ್ದರು. ಯಾಕ್ರೀ ಜೋರಾಗಿ ಬಡಿತೀರಾ ಅಂತಾ ಕೇಳಿದಾಗ, ಏನು ಅಷ್ಟೆಲ್ಲಾ ಜೋರಾಗಿ ಬಡಿದೆನಾ ಅಂತಾ ಪ್ರಶ್ನಿಸುತ್ತಾರೆ. ಆಗ ರೂಪೇಶ್ ನೋವಲ್ವಾ ಹಾಗೆ ಮಾಡಿದ್ರೆ ಅಂತಾ ಕೇಳಿದಾಗ, ಅಣ್ಣಾ ಸಖತ್ ಆ್ಯಕ್ಟಿಂಗ್ ಮಾಡ್ತೀಯಾ ಬಿಡಣ್ಣ ಅಂತಾರೆ. ಅದು ಸಖತ್ ಟ್ರೋಲ್ ಆಗಿತ್ತು ಎಂದು ರೂಪೇಶ್ ಹೇಳಿದ್ದಾರೆ.




