ಡಿಕೆಶಿ ಭೇಟಿಯಾಗಿದ್ದೇಕೆ? ಸ್ವಾಮೀಜಿಗಳು ಏನಂದ್ರು?

ರಾಜ್ಯ ಕಾಂಗ್ರೆಸ್ಸಿನ ಪವರ್‌ ಶೇರಿಂಗ್‌ ಕಿತ್ತಾಟದ ನಡುವೆ, ಸ್ವಾಮೀಜಿಗಳು ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ನಾಯಕರಿಗೆ ಬಹಿರಂಗವಾಗೇ ಬೆಂಬಲ ಘೋಷಿಸಿದ್ದಾರೆ. ಇದೀಗ ರಾಜ್ಯದ ಹಿಂದುಳಿದ ವರ್ಗದ ಸಮುದಾಯದ ವಿವಿಧ ಪೀಠಗಳ ಸ್ವಾಮೀಜಿಗಳು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲ. ಮುಖ್ಯಮಂತ್ರಿಯಾಗಿ ಎಂದು ಆಶೀರ್ವಾದವನ್ನೂ ಮಾಡಿದ್ದಾರೆ.

ಸಿದ್ದು,ಡಿಕೆಶಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ, ಟಾಕ್‌ವಾರ್‌ ತಾತ್ಕಾಲಿಕವಾಗಿ
ಬ್ರೇಕ್‌ ಬಿದ್ದಿತ್ತು. ಕುರ್ಚಿ ಫೈಟ್ ತಣ್ಣಗಾಗಿರುವ ಈ ವೇಳೆ ಸ್ವಾಮೀಜಿಗಳ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಸ್ವಾಮೀಜಿವರು, ಬಹಿರಂಗವಾಗಿಯೇ ಡಿಕೆಶಿ ಸಿಎಂ ಆಗಬೇಕೆಂಬ ಹೇಳಿಕೆ ನೀಡಿದ್ದರು.

ಈಗ, ಡಿ.ಕೆ. ಶಿವಕುಮಾರ್ ಅವರನ್ನು ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಭೇಟಿಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಇನ್ನು, ಸ್ವಾಮೀಜಿಗಳ ಭೇಟಿಯ ಕಾರಣವನ್ನೂ ಡಿಕೆಶಿ ಬಹಿರಂಗಪಡಿಸಿದ್ದಾರೆ. ಸ್ವಾಮೀಜಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಬೆಂಗಳೂರಿಗೆ ಬಂದಾಗ ಉಳಿದುಕೊಳ್ಳಲು ಜಾಗ ಇಲ್ಲ. ನಮಗೆ ಏನಾದರೂ ಮಾಡಿ ಜಾಗ ಕೊಡಿ ಎಂದು ಕೇಳಿದ್ದಾರೆ. ಸಿಎ ನಿವೇಶನ ಪರಿಶೀಲಿಸಿ ಜಾಗ ಕಲ್ಪಿಸುವ ಕೆಲಸ ಮಾಡುತ್ತೇನೆ. ಅವರ ಬೇಡಿಕೆ ನ್ಯಾಯಬದ್ಧವಾಗಿದೆ. ಹಿಂದುಳಿದ ವರ್ಗದ ಸ್ವಾಮೀಜಿಗಳ ಬೇಡಿಕೆ ಪರಿಗಣಿಸಲಾಗಿದೆ, ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಆದರೂ, ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಡಿಕೆಶಿ ಭೇಟಿ ವಿಚಾರ ಸಾಕಷ್ಟು ಸದ್ದು ಮಾಡ್ತಿದೆ. ರಾಜ್ಯ ಕಾಂಗ್ರೆಸ್‌ನಲ್ಲಿನ ಪವರ್‌ ಶೇರಿಂಗ್‌ ಕಿತ್ತಾಟದ ಬಗ್ಗೆ ನಿಮ್ಮ ಅಭಿಪ್ರಾಯವೇನು?. ಕಾಮೆಂಟ್‌ ಮಾಡಿ ತಿಳಿಸಿ.

About The Author