ಎಲ್ಲ ಆಟಗಾರರೂ ಹಜಾರೆಯಲ್ಲಿ ಆಡಲೇಬೇಕು

ತಾರಾ ಆಟಗಾರರಾದ ರೋಹಿತ್‌ ಶರ್ಮಾ ಮತ್ತು ವಿರಾಟ್ ಕೊಹ್ಲಿಯಷ್ಟೇ ಅಲ್ಲ. ಭಾರತೀಯ ತಂಡದ ಪರ ಆಡುವ ಪ್ರಸಕ್ತ ಎಲ್ಲಾ ಆಟಗಾರರು – ಡಿ.24ರಿಂದ ಆರಂಭ ವಾಗಲಿರುವ ವಿಜಯ್ ಹಜಾರೆ ದೇಶಿ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನಿಷ್ಠ 2 ಪಂದ್ಯಗಳನ್ನು ಆಡುವುದು ಕಡ್ಡಾಯ ಎಂದು ಬಿಸಿಸಿಐ ಹೇಳಿದೆ.

ಈ ಮೂಲಕ ಜ.11ರಿಂದ ಆರಂಭವಾ ಗಲಿರುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೂ ಮುನ್ನ ಹಿರಿಯ ಆಟಗಾರರು ದೇಶಿ ಕ್ರಿಕೆಟ್‌ನಲ್ಲಿ ಆಡಬೇಕೆನ್ನುವ ಸಂದೇಶವನ್ನು ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ನೀಡಿದೆ. ಇದೇ ಕಾರಣಕ್ಕೆ ಮುಂಬರುವ ಡೆಲ್ಲಿ ಪರ ಕೊಹ್ಲಿ ಆಡುವುದಾಗಿ ಹಜಾರೆಯಲ್ಲಿ ಮುಂಬೈ ಪರ ರೋಹಿತ್, ಒಪ್ಪಿಕೊಂಡಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author