Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಮೀನ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.
ಮೀನ ರಾಶಿಯವರಿಗೆ 2026 ಅನುಕೂಲಕರವಾಗಿರುತ್ತದೆ. ಈ ವರ್ಷ ದಾಂಪತ್ಯ ಜೀವನದಲ್ಲಿ ಅಭಿವೃದ್ಧಿಯಾಗಲಿದೆ. ಬೇಸರವೆಲ್ಲ ಹೋಗಿ, ಆಧ್ಯಾತ್ಮಿಕತೆಗೆ ಹೆಚ್ಚು ಮಹತ್ವ ನೀಡುತ್ತೀರಿ. ಸದ್ಯ ಮೀನ ರಾಶಿಯವರಿಗೆ ಸಾಡೇಸಾಥಿ ನಡೆಯುತ್ತಿದ್ದು, ಉದರ ಬಾಧೆ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಹಾರ ಸೇವನೆಯ ಬಗ್ಗೆ ಹೆಚ್ಚಿನ ಗಮನ ನೀಡಿ.
ಕಾರ್ಯಕ್ರಮದಲ್ಲಿ ರುಚಿ ರುಚಿ ಆಹಾರ ಸೇವಿಸುವ ಯೋಗ ಸಿಕ್ಕರೂ, ಅದರಲ್ಲೂ ನೀವು ಎಚ್ಚರಿಕೆಯಿಂದ ಆಹಾರ ಸೇವಿಸಬೇಕಾಗುತ್ತದೆ. ಅಲ್ಲದೇ ಸಾಡೇಸಾಥಿ ಇರುವ ಕಾರಣ ನೀವು ಹನುಮಾನ್ ಚಾಲೀಸಾ, ಶ್ರೀರಾಮನಾಮ ಜಪ ಮಾಡಲೇಬೇಕು.
ಗುರುವಾರ, ಸೋಮವಾರ ಲಕ್ಕಿ ದಿನ. 2 ಮತ್ತು 9 ಲಕ್ಕಿ ನಂಬರ್. ಕುಲದೇವರ ದೇವಸ್ಥಾನಕ್ಕೆ ತಪ್ಪದೇ ಪ್ರತೀ ವರ್ಷ ಮನೆಯವರೆಲ್ಲರೂ ಹೋಗಿ ಬನ್ನಿ.




