Health Tips: ನಾವು ಪ್ರತಿದಿನ ಆರೋಗ್ಯಕ್ಕೆ ಉತ್ತಮವಾದ ಆಹಾರಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಅಂತಾ ನಮಗೆಲ್ಲ ತಿಳಿದೇ ಇದೆ. ಆದರೆ ನಾವು ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸುವ ರೀತಿ ಸರಿಯಾಗಿದ್ದಾಗ ಮಾತ್ರ ಅದು ನಮ್ಮ ಆರೋಗ್ಯ ಅಬಿವೃದ್ಧಿ ಮಾಡುತ್ತದೆ. ಅದೇ ರೀತಿ ನಾವಿಂದು ಯಾವ ಆಹಾರಗಳನ್ನು ನಾವು ಹಸಿಯಾಗಿ ಅಥವಾ ಬೇಯಿಸದೇ ಸೇವಿಸಬಾರದು ಅಂತಾ ಹೇಳಲಿದ್ದೇವೆ.
ಪಾಲಕ್: ಸಾಮಾನ್ಯವಾಗಿ ಸೊಪ್ಪುಗಳನ್ನು ಹಸಿಯಾಗಿ ಸೇವಿಸಬೇಕು ಅಂತಾ ಹೇಳಲಾಗುತ್ತದೆ. ಪುದೀನಾ, ಮೆಂತ್ಯ ಸೇರಿ ಕೆಲ ಸೊಪ್ಪುಗಳನ್ನು ನಾವು ಹಸಿಯಾಗಿ ಸೇವಿಸುತ್ತೇವೆ. ಆದರೆ ಕೆಲ ಸೊಪ್ಪುಗಳನ್ನು ನಾವು ಬೇಯಿಸಿಯೇ ಸೇವಿಸಬೇಕು. ಪಾಲಕ್ ಸೊಪ್ಪನ್ನು ನಾವು ಹಸಿಯಾಗಿ ಎಂದಿಗೂ ಸೇವಿಸಬಾರದು. ಇದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಇದರಿಂದ ಯಾವುದಾದರೂ ಪದಾರ್ಥ ಮಾಡಿ ಸೇವಿಸಬೇಕು.
ಧಾನ್ಯಗಳು: ನಾವು ಬಳಸುವ ಧಾನ್ಯಗಳಾಗಿರುವ ಅಕ್ಕಿ-ಗೋಧಿ, ರಾಗಿ, ಇದನ್ನು ಇದರ ಹುಡಿಯನ್ನು ನಾವು ಹಸಿಯಾಗಿ ಅಥವಾ ಬೇಯಿಸದೇ ಸೇವಿಸಬಾರದು. ಕೆಲವರಿಗೆ ಇದನ್ನು ಕೂಡ ಬೇಯಿಸದೇ ಟೈಂಪಾಸಿಗೆ ತಿನ್ನುವ ಅಭ್ಯಾಸವಿರುತ್ತದೆ. ಅವರು ಹೀಗೆ ಪ್ರತಿದಿನ ಸ್ವಲ್ಪ ಸ್ವಲ್ಪ ಧಾನ್ಯ ಸೇವನೆ ಮಾಡಿದರೆ, ಅವರ ಆರೋಗ್ಯದ ಮೇಲೆ ಅದು ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ ಧಾನ್ಯಗಳನ್ನು ಸದಾ ಬೇಯಿಸಿಯೇ ಸೇವಿಸಿ.
ಬೆಳೆಕಾಳುಗಳು: ಬೆಳೆಕಾಳುಗಳನ್ನು ನೆನೆಸಿ, ಬೇಯಿಸಿ ಸೇವಿಸಬೇಕು. ಶೇಂಗಾ, ಕಡಲೆ, ಹೆಸರು ಮಾತ್ರ ಹಸಿಯಾಗಿ ಸೇವಿಸಬಹುದು. ಆದರೆ ಉಳಿದ ಬೇಳೆಕಾಳುಗಳನ್ನು ಬೇಯಿಸಿಯೇ ಸೇವಿಸಬೇಕು.
ಡ್ರೈಫ್ರೂಟ್ಸ್: ಡ್ರೈಫ್ರೂಟ್ಸ್ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಅದನ್ನು ನಾವು ಹುರಿದು ತಿನ್ನುವ ಬದಲು, ಹಸಿಯಾಗಿ ಸೇವಿಸುವ ಬದಲು, ನೆನೆಸಿಯೇ ಸೇವಿಸಬೇಕು. ಆಗಲೇ ಅದರಿಂದ ನಮ್ಮ ಆರೋಗ್ಯ, ಸೌಂದರ್ಯ ಎರಡೂ ಚೆನ್ನಾಗಿರುತ್ತದೆ.




