Big boss Season 12: ಸದ್ಯ ಎಲ್ಲೆಲ್ಲೂ ಬಿಗ್‌ಬಾಸ್ ಕನ್ನಡ ಫಿನಾಲೆದೇ ಸುದ್ದಿ. ಈ ಬಾರಿ ಗಿಲ್ಲಿ ಗೆಲ್ಲಲ್ಲಿ ಅಂತಾ ಬೆಂಬಲಿಸುವವರು ಹೆಚ್ಚಾಗಿದ್ದರೂ, ಅಶ್ವಿನಿ ಮತ್ತು ರಕ್ಷಿತಾಗೂ ಹೆಚ್ಚಿನ ಬೆಂಬಲ ಸಿಗುತ್ತಿದೆ.
ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿಯಾಗಿರುವ ಮಲ್ಲಮ್ಮ ಅವರು ರಕ್ಷಿತಾಗಾಗಿ ಬಟ್ಟೆಯನ್ನು ಗಿಫ್ಟ್ ಆಗಿ ನೀಡುತ್ತಿದ್ದಾರೆ. ಹಾಗಾಗಿ ಫ್ಯಾಷನ್ ಡಿಸೈನರ್ ಬಳಿ ಡ್ರೆಸ್ ಡಿಸೈನ್ ಮಾಡಿಸಲಾಗಿದೆ. ಆದರೆ ಮಲ್ಲಮ್ಮ ರಕ್ಷಿತಾಗೆ ಈ ವಸ್ತ್ರ ಕಳಿಸುವ ಮುನ್ನ, ತಾವೇ ಹಾಕಿ ನೋಡಿದ್ದಾರೆ.
ನೀವೇ ಈ ವಸ್ತ್ರ ಹಾಕಿದ್ರೆ ಹೇಗೆ ಅಂತಾ ಕೇಳಿದ್ದಕ್ಕೆ, ಇದು ನನ್ನ ಮಮ್ಮಗಳ ವಸ್ತ್ರ ಅದಕ್ಕೆ ನಾನೇ ಮುಂಚೆ ಹಾಕಿ ನೋಡ್ತೇನೆ ಎಂದಿದ್ದಾರಂತೆ ಮಲ್ಲಮ್ಮ. ವಯಸ್ಸಾದ್ರೂ ಮಲ್ಲಮ್ಮಂಗೆ ಈ ಡ್ರೆಸ್ ಫಿಟ್ ಆಗಿದ್ದಂತೂ ಸುಳ್ಳಲ್ಲ.




