Sandalwood: ನಟ ಅನಿರುದ್ಧ ವಿಷ್ಣು ದಾದಾ ಅಳಿಯನಾಗಿದ್ದು ಹೇಗೆ..? ಕೀರ್ತಿಗೆ ಪರಿಚಯವಾಗಿದ್ದು ಹೇಗೆ..?

Sandalwood: ನಟ ಅನಿರುದ್ಧ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಹೇಗೆ ಅವರು ವಿಷ್ಣುದಾದಾ ಅವರ ಅಳಿಯ ಆಗಿದ್ದು ಅನ್ನೋ ಬಗ್ಗೆ ಮಾತನಾಡಿದ್ದಾರೆ.

ಈ ವರ್ಷ ಅನಿರುದ್ಧ ಮತ್ತು ಕೀರ್ತಿ ಅವರು ವಿವಾಹವಾಗಿ 25 ವರ್ಷವಾಗತ್ತೆ. ಇದೇ ಸ್ಫೆಶಲ್ ಮೂಮೆಂಟ್‌ನಲ್ಲಿ ಅವರು ತಾವು ಕೀರ್ತಿ ಅವರನ್ನು ಭೇಟಿಯಾಗಿದ್ದು ಹೇಗೆ ಅಂತಾ ಹೇಳಿದ್ದಾರೆ. ಯಾವುದೋ ನಾಟಕದಲ್ಲಿ ವಿಷ್ಣುವರ್ಧನ್ ಮತ್ತು ಭಾರತಿ ಅವರು ಅನಿರುದ್ಧ ಅವರನ್ನು ನೋಡಿದ್ದರು. ಬಳಿಕ ಅವರ ಫ್ಯಾಮಿಲಿಯಲ್ಲಿ ನಡೆದ ಮದುವೆಯಲ್ಲಿ ಕೂಡ ಅನಿರುದ್ಧ ಅವರನ್ನು ವಿಷ್ಣುವರ್ಧನ್ ಮತ್ತು ಭಾರತಿ ನೋಡಿದ್ದರು.

ಆಗ ವಿಷ್ಣುವರ್ಧನ್ ಅವರ ಮನೆಯವರೇ ಆಗಿದ್ದ ಚಂದನಾ ಎಂಬುವವರು, ನಮ್ಮ ಕೀರ್ತಿಗೆ ಈ ಹುಡುಗ ಉತ್ತಮ ಜೋಡಿ ಅಂತಾ ನನಗನ್ನಿಸುತ್ತಿದೆ ಎಂದು ಹೇಳಿದ್ದರಂತೆ. ಬಳಿಕ ವಿಷ್ಣು ಅವರು ನನ್ನ ಮಗಳನ್ನು ಹೇಗೆ ಸಾಕುತ್ತಿಯಾ..? ಎಂದು ಪ್ರಶ್ನೆ ಕೇಳಿದಾಗ, ನಾನು ಸದ್ಯ ಶ್ರೀಮಂತನಲ್ಲ. ನನ್ನ ಪ್ರವಾಸ ಇನ್ನೂ ಶುರುವಾಗಿದೆ. ಆದರೆ ನಿಮ್ಮ ಮಗಳನ್ನು ನಾನು ಖುಷಿಯಾಗಿ ಇಡುತ್ತೇನೆ ಎಂದರಂತೆ. ಇದನ್ನು ಕೇಳಿ ವಿಷ್ಣುವರ್ಧನ್ ನಕ್ಕರಂತೆ. ಹಣಕ್ಕಿಂತ ಗುಣ ಮುಖ್ಯ. ನಿಮ್ಮ ಕಣ್ಣು ನಾನು ನೋಡಿದ್ದೇನೆ, ಅದರಲ್ಲಿ ಪ್ರಾಮಾಣಿಕತೆ ಇದೆ. ನಿಮ್ಮ ಮೇಲೆ ನಂಬಿಕೆ ಇದೆ ಎಂದರು. ಬಳಿಕ 2001ರಲ್ಲಿ ಎಂಗೇಜ್ಮೆಂಟ್ ಆಗಿ ಬಳಿಕ ವಿವಾಹವಾಯಿತು.

About The Author