Health Tips: ನಾವು ಹೆಚ್ಚು ಕೆಲಸ ಮಾಡಿದಾಗ, ಹೆಚ್ಚು ನಡೆದಾಗ, ಓಡಿದಾಗ ಸುಸ್ತಾಗೋದು ಕಾಮನ್. ಆದರೆ ನೀವು ಹೆಚ್ಚು ಕೆಲಸ ಮಾಡಲಿಲ್ಲ. ಹೆಚ್ಚು ಓಡಲೂ ಇಲ್ಲ, ನಡೆಯಲೂ ಇಲ್ಲ. ಆದರೂ ನಿಮಗೆ ಸುಸ್ತಾಗುತ್ತಿದೆ ಎಂದಲ್ಲಿ, ನೀವು ನಿಮ್ಮ ಹೃದಯದ ಆರೋಗ್ಯದ ಕಡೆ ಗಮನ ಹರಿಸಬೇಕಾದ ಸಮಯ ಬಂದಿದೆ ಎಂದರ್ಥ.
ಈ ಬಗ್ಗೆ ಡಾ.ಪವನ್ ಕುಮಾರ್ ಅವರು ವಿವರಿಸಿದ್ದು, ಹೆಚ್ಚು ಕೆಲಸ ಮಾಡದೆಯೇ ನಿಮಗೆ ಸುಸ್ತಾಗುತ್ತಿದೆ ಎಂದರೆ, ನೀವು ಹೃದಯದ ಪರೀಕ್ಷೆ ಮಾಡಿಸಿಕ“ಳ್ಳಬೇಕು ಎಂದರ್ಥ. ಏಕೆಂದರೆ, ಸಾಮಾನ್ಯವಾಗಿ ನಡೆದಾಗ, ಓಡಿದಾಗ, ಕೆಲಸ ಮಾಡಿದಾಗ, ನಮಗೆ ಆಯಾಸವಾದರೆ ನಾವು ಮಲಗೆದ್ದ ಬಳಿಕ ಆ ಸುಸ್ತೆಲ್ಲ ಹೋಗುತ್ತದೆ. ಆದರೆ ನಿಮ್ಮ ಹೃದಯ ವೀಕ್ ಆಗಿದ್ದರೆ, ನೀವು ಮಲಗೆದ್ದರೂ ನಿಮ್ಮ ಸುಸ್ತು ಹೋಗುವುದಿಲ್ಲ.
ಹೆಚ್ಚು ಸಮಯ ಮಲಗಿದರೂ ಸುಸ್ತು ಹಾಗೇ ಇಱುತ್ತದೆ. ಈ ಲಕ್ಷಣ ಕಂಡುಬಂದಲ್ಲಿ, ನಿಮಗೆ ಹೃದಯ ಸಮಸ್ಯೆ ಇದೆ ಎಂದರ್ಥ. ಹಾಗಾಗಿ ಇಂಥ ಲಕ್ಷಣ ಕಂಡುಂಬದಲ್ಲಿ ಉದಾಸೀನ ಮಾಡದೇ, ನಿರ್ಲಕ್ಷಿಸದೇ ವೈದ್ಯರ ಬಳಿ ತಪಾಸಣೆ ಮಾಡಿಸೋದು ಉತ್ತಮ ಅಂತಾರೆ ವೈದ್ಯರು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




