ರಶ್ಮಿಕಾ-ವಿಜಯ್ ಮದುವೆಗೆ ರಾಜಸ್ಥಾನದ ಸಿಟಿ ಪ್ಯಾಲೇಸ್‌ನಲ್ಲಿ ಭರ್ಜರಿ ಸಿದ್ಧತೆ, ವೀಡಿಯೋ ವೈರಲ್..!?

Movie News: ಹಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಮಧ್ಯೆ ಸಂಥಿಂಗ್ ಸಂಥಿಂಗ್ ಇದೆ ಅಂತಾ ಗುಸು ಗುಸು ಇತ್ತು. ಕಳೆದ ವರ್ಷ ಇಬ್ಬರೂ ಎಂಗೇಜ್ ಆಗಿದ್ದಾರೆಂಬ ಸುದ್ದಿಯೂ ಇದೆ. ಆದರೆ ಇವರೆಗೂ ಇಬ್ಬರೂ ಈ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲಾ. ಈ ಬಗ್ಗೆ ಕೇಳಿದಾಗಲೆಲ್ಲ, ಹಾರಿಕೆಯ ಉತ್ತರ ನೀಡುತ್ತಾರೆ. ಆದರೆ ಇದೇ ಫೆಬ್ರವರಿಯಲ್ಲಿ ರಶ್ಮಿಕಾ ಮತ್ತು ವಿಜಯ್ ರಾಜಸ್ತಾನದಲ್ಲಿ ವಿವಾಹವಾಗಲಿದ್ದಾರೆಂಬ ಸುದ್ದಿ ಇದೆ. ಅದಕ್ಕೆ ತಕ್ಕ ವೀಡಿಯೋ ಕೂಡ ವೈರಲ್ ಆಗಿದೆ. ಆದರೆ ಇವರು ಹೇಳೋದು ಎಷ್ಟು ಸತ್ಯ ಅಂತ ಮಾತ್ರ ಯಾರಿಗೂ ತಿಳಿದಿಲ್ಲ.

ವೈರಲ್ ಆಗಿರುವ ಈ ವೀಡಿಯೋದಲ್ಲಿ ವ್ಯಕ್ತಿ ರಾಜಸ್ತಾನದ ಉದಯಪುರದ ಸಿಟಿ ಪ್ಯಾಲೆಸ್ ತೋರಿಸಿ, ನಾನು ಇಲ್ಲಿ ಯಾವುದೋ ಎನ್‌ಆರ್‌ಐ ಮದುವೆ ಇದೆ ಅಂತಾ ತಿಳಿದಿದ್ದೆ. ಆದರೆ ಇದು ರಶ್ಮಿಕಾ ಮತ್ತು ವಿಜಯ್ ಮದುವೆಯಾಗಿ ತಯಾರಾಗುತ್ತಿರುವ ಮದುವೆ ಮಂಟಪ. ಇಷ್ಟು ಖರ್ಚನ್ನು ನಾನು ಇಮ್ಯಾಜಿನ್ ಕೂಡ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಆದರೆ ಇಂಥದ್ದೇ ಹಲವು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೆಲ್ಲವೂ ಫೇಕ್ ನ್ಯೂಸ್ ಎನ್ನುತ್ತಿದ್ದಾರೆ ಜನ. ಅಲ್ಲದೇ ಈ ರೀಲ್ಸ್‌ಗೆ ಸಿಕ್ಕಾಪಟ್ಟೆ ಕಾಮೆಂಟ್ಸ್ ಬಂದಿದ್ದು, ಎಲ್ಲರೂ ರಶ್ಮಿಕಾ ಮತ್ತು ವಿಜಯ್ ಮದುವೆ ಮಂಟಪಕ್ಕೆ ಹೋಗುತ್ತಿದ್ದಾರೆ. ಆದರೆ ಪಾಪಾ ಮದುವೆಯಾಗುತ್ತಿರುವ ಆ ಜೋಡಿಗೇ ತಮ್ಮ ಮದುವೆ ಮಂಟಪ ಎಲ್ಲಿದೆ ಅಂತಾ ತಿಳಿದಿಲ್ಲವೆಂದು ತಮಾಷೆ ಮಾಡಿದ್ದಾರೆ.

ಇನ್ನು ಕೆಲ ಮೂಲಗಳ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ಈ ವರ್ಷ ವಿವಾಹವಾಗುತ್ತಿಲ್ಲ. ಅವರಿಬ್ಬರೂ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಅಂತಲೇ ಹೇಳುತ್ತಾರೆ. ರಶ್ಮಿಕಾ-ವಿಜಯ್ ನಿಜವಾಗಿಯೂ ಈ ತಿಂಗಳು ವಿವಾಹವಾಗುತ್ತಿದ್ದಾರಾ..? ಅಥವಾ ಮದುವೆ ಮುಂದೂಡಿಕೆಯಾಗಿದೆಯಾ ಅಂತಾ ಕಾದು ನೋಡಬೇಕಿದೆ.

 ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

About The Author