Spiritual: ಹೆಣ್ಣು ಮಕ್ಕಳೇಕೆ ಪುರುಷರ ರೀತಿ ದೇವರಿಗೆ ಉದ್ದಂಡ ನಮಸ್ಕಾರ ಮಾಡಬಾರದು..?

Spiritual: ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದೆ. ಪೂಜೆ-ಪುನಸ್ಕಾರ ಮಾಡುವ, ದೇವಸ್ಥಾನಕ್ಕೆ ಹೋಗುವಾಗ, ಶುಭ ಕಾರ್ಯಗಳಲ್ಲಿ, ಸಾವಾದಾಗ, ಹೀಗೆ ನಮ್ಮ ಜೀವನದ ಪ್ರತೀ ಹೆಜ್ಜೆಯಲ್ಲೂ ಹಿಂದೂಗಳು ಹಲವು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಅಂಥ ಪದ್ಧತಿಗಳಲ್ಲಿ ನಮಸ್ಕಾರ ಮಾಡೋದು ಕೂಡ 1. ಹಿಂದೂಗಳಲ್ಲಿ ಹೆಣ್ಣು ಮಕ್ಕಳು 1 ರೀತಿ ನಮಸ್ಕಾರ ಮಾಡುವುದಾದರೆ, ಪುರುಷರು ಬೇರೆ ರೀತಿ ನಮಸ್ಕರಿಸಬೇಕು.

ಪುರುಷರು ತಮ್ಮ ಇಡೀ ದೇಹವನ್ನು ನೆಲಕ್ಕೆ ತಾಗಿಸಿ, ಉದ್ದಂಡ ಅಥವಾ ಸಾಷ್ಟಾಂಗ ನಮಸ್ಕಾರ ಮಾಡಿದರೆ, ಹೆಣ್ಣು ಮಕ್ಕಳು ಪಂಚಾಂಗ್ ನಮಸ್ಕಾರ ಮಾಡಬೇಕು. ಅಂದ್ರೆ, ಹಣೆ, ಕೈ, ಮಂಡಿ, ಕಾಲು ಮಾತ್ರ ನೆಲಕ್ಕೆ ತಾಕುವಂತೆ ನಮಸ್ಕರಿಸಬೇಕು.

ಯಾಕೆ ಹೀಗೆ ಅಂದ್ರೆ, ಪುರುಷರು ಯಾವುದೇ ಜೀವಕ್ಕೂ ಜನ್ಮ ನೀಡುವುದಿಲ್ಲ. ಹಾಗಾಗಿ ಅವರು ಸಾಷ್ಟಾಂಗ ನಮಸ್ಕಾರ ಮಾಡಬಹುದು. ಆದರೆ ಮಹಿಳೆಯರು 1 ಜೀವಕ್ಕೆ ಜನ್ಮ ನೀಡುವವರು. ಹಾಗಾಗಿ ಅವರ ಎದೆ, ಉದರ ಯಾವುದೂ ನೆಲಕ್ಕೆ ತಾಕಬಾರದು. ಆ ಕಾರಣಕ್ಕೆ ಮಹಿಳೆಯರು ಪಂಚಾಂಗ ನಮಸ್ಕಾರ ಮಾತ್ರ ಮಾಡಬೇಕು. ಉದ್ದಂಡ ನಮಸ್ಕಾರ ಮಾಡಬಾರದು ಅಂತಾ ಹೇಳೋದು.

About The Author